ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸರ್ಕಾರಿ ನೌಕರರಿಗೂ ವಸ್ತ್ರಸಂಹಿತೆ; ಇಂದಿನಿಂದಲೇ ಜಾರಿ

Mainashree
Updated On : 14 Sept 2013, 10:02 am

ಕನ್ನಡಪ್ರಭ ವಾರ್ತೆ  ಬೆಂಗಳೂರು  ಸೆ.14
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇದೀಗ ಸರ್ಕಾರಿ ನೌಕರರಿಗೂ ವಸ್ತ್ರ ಸಂಹಿತೆ ಜಾರಿಯಾಗಿದೆ.
ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುತ್ತಿದ್ದು, ಕಚೇರಿಗಳಿಗೆ ಬರುವ ನೌಕರರು ಸಭ್ಯ ಉಡುಗೆ ಧರಿಸಿಯೇ ಬರಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪುರುಷರು ಪ್ಯಾಂಟ್, ಷರ್ಟ್, ಕುರ್ತಾ, ಪೈಜಾಮ, ಮಹಿಳೆಯರು ಸೀರೆ, ಚೂಡಿದಾರ ಧರಿಸಿ ಬರಬೇಕು. ಪುರುಷರು ಟೀ ಷರ್ಟ್ ಧರಿಸುವಂತಿಲ್ಲ. ಅದೇ ರೀತಿ ಮಹಿಳೆಯರು ಸ್ಕರ್ಟ್, ಟೀ ಷರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ ಎನ್ನುತ್ತದೆ ಈ ವಸ್ತ್ರಸಂಹಿತೆ. ಅದೇ ರೀತಿ ಡಿ ದರ್ಜೆ ನೌಕರರು ಸಮವಸ್ತ್ರ ಧರಿಸಿ ಬರುವುದು ಕೂಡ ವಸ್ತ್ರಸಂಹಿತೆಯಲ್ಲಿ ಕಡ್ಡಾಯ ಮಾಡಲಾಗಿದೆ.
ಸಚಿವಾಲಯ ನೌಕರರ ಸಂಘ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿದೆ. ಸಚಿವಾಲಯದ ಸಿಬ್ಬಂದಿ, ಅದರಲ್ಲೂ ಹೊಸದಾಗಿ ಕೆಲಸಕ್ಕೆ ಸೇರಿದವರು ಶೋಭೆ ತರದಿರುವ ಉಡುಪುಗಳನ್ನು ಧರಿಸಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಸಚಿವಾಲಯದ ವಾತಾವರಣ ಹಾಳಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರು ಕೆಲಸಕ್ಕೆ ಬರುವಾಗ ಸಭ್ಯ ಉಡುಪು ಧರಿಸುವಂತೆ ಆದೇಶ ಹೊರಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನೌಕರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement