ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೇಶದಲ್ಲಿ ಹೃದಯ ಶಸ್ತ್ರಚಿಕಿತ್ಸಕರ ಕೊರತೆ

Vishwanath S
Updated On : 28 Sept 2013, 11:21 am

ಕ.ಪ್ರ.ವಾರ್ತೆ ,  ಬೆಳಗಾವಿ ,  ಸೆ. 28
ದೇಶವಷ್ಟೇ ಅಲ್ಲ, ವಿಶ್ವದಲ್ಲಿಯೇ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ರೋಗಕ್ಕೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಲ್ಲದೇ ದೇಶದಲ್ಲಿ ಹೃದಯ ಶಸ್ತ್ರಚಿಕಿತ್ಸಕರ ಕೊರತೆ ಇದ್ದು, ಇದರಿಂದಲೂ ಹೃದ್ರೋಗಗಳಿಂದ ಮೃತಪಡುತ್ತಿರುವ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣುತ್ತಿದೆ.
ಪ್ರತಿ ವರ್ಷ ಭಾರತದಲ್ಲಿ ಸುಮಾರು 30 ಲಕ್ಷ ಜನರು ಹೃದ್ರೋಗಗಳಿಂದ ಮೃತಪಡುತ್ತಿದ್ದಾರೆ. ಭಾರತೀಯ ಹಾರ್ಟ್ ಫೌಂಡೇಷನ್ ಪ್ರಕಾರ ದೇಶಾದ್ಯಂತ ಪ್ರತಿ ವರ್ಷ 1.20 ಲಕ್ಷ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಕನಿಷ್ಠ 20 ಲಕ್ಷ ರೋಗಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ.
'ದೇಶದಲ್ಲಿ ಪ್ರತಿ ವರ್ಷ 42 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶ ಪಡೆಂುತ್ತಾರೆ. ಈ ಪೈಕಿ 12 ಸಾವಿರ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ ಪಡೆಂುತ್ತಾರೆ. ಇವರಲ್ಲಿ ಕೇವಲ 1 ಸಾವಿರ ವಿದ್ಯಾರ್ಥಿಗಳು ಮಾತ್ರ ಹೃದಂು ಶಸ್ತ್ತ್ರಚಿಕಿತ್ಸಕರಾಗಲು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ವೆಚ್ಚ. ಶಸ್ತ್ರಚಿಕಿತ್ಸೆ ವ್ಯಾಸಂಗ ಮಾಡಲು ಹೆಚ್ಚಿನ ಹಣ ಬೇಕು. ಬಳಿಕ ಆಸ್ಪತ್ರೆ ಆರಂಭಿಸಲು, ಉಪಕರಣಗಳೆಲ್ಲ ವೆಚ್ಚ' ಎನ್ನುತ್ತಾರೆ ಕೆಎಲ್‌ಇ ಹಾರ್ಟ್ ಫೌಂಡೇಷನ್ ನಿರ್ದೇಶಕ ಹಾಗೂ ಹೃದಂು ರೋಗ ತಜ್ಞ ಡಾ.ಎಂ.ಡಿ. ದೀಕ್ಷಿತ್.
ಹೃದಂುದ ಆರೈಕೆ: ಹೃದ್ರೋಗವನ್ನು ತಡೆಗಟ್ಟಲು ಕಾರ್ಬೋಹೈಡ್ರೇಟ್, ವಿಟಮಿನ್ ಮತ್ತು ಕೊಬ್ಬಿನಾಂಶವಿರುವ ಪದಾರ್ಥಗಳ ಸೇವನೆಂುಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ತಂಬಾಕು ಸೇವನೆ, ಮದ್ಯಪಾನ, ಧೂಮಪಾನ ಮಾಡಬಾರದು. ಆಗಾಗ ದೇಹದ ತೂಕ ಪರೀಕ್ಷಿಸಿಕೊಳ್ಳಬೇಕು. ನಿತ್ಯ ಒಂದೆರಡು ಗಂಟೆ ಮ್ಯಾಂಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಹೃದಯ ತಜ್ಞರು.
ಇಂದು ವಿಶ್ವ ಹೃದಯ ದಿನ
ಹೃದಂು ರೋಗವನ್ನು ತಡೆಗಟ್ಟಲು ಮತ್ತು ಹೃದಂು ಆರೈಕೆ ಕುರಿತು ಜಾಗೃತಿ, ತಿಳಿವಳಿಕೆ ಮೂಡಿಸಲು 1999ರಿಂದ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಕೊನೆ ಭಾನುವಾರವನ್ನು ವಿಶ್ವ ಹೃದಂು ಫೌಂಡೇಷನ್ 100 ದೇಶಗಳಲ್ಲಿ ವಿಶ್ವ ಹೃದಂು ದಿನವನ್ನಾಗಿ ಆಚರಿಸುತ್ತಿದೆ. ಆದರೆ 2011ರಿಂದ ಪ್ರತಿ ವರ್ಷದ ಸೆ.29 ರಂದು ವಿಶ್ವ ಹೃದಂು ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಆ ಮೂಲಕ ವಿಶ್ವದ ಶೇ.80ರಷ್ಟು ಜನತೆಗಾದರೂ, ವಿವಿಧ ಜಾಗೃತಿ ಶಿಬಿರ, ರ್ಯಾಲಿ, ಉಪನ್ಯಾಸ ಮುಂತಾದವುಗಳ ಮೂಲಕ ಹೃದಂು ಆರೈಕೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಜಪಾನಿಗರ ಗುಂಡಿಗೆ ಗಟ್ಟಿ
ಜಪಾನ್‌ನಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ವಿಶ್ವದಲ್ಲಿಯೇ ಕಡಿಮೆ. ಅಲ್ಲಿ ಜನರು ಹೆಚ್ಚಾಗಿ ಮೀನು ಪದಾರ್ಥಗಳನ್ನು ಸೇವಿಸುತ್ತಿದ್ದು, ಅದರಲ್ಲಿರುವ ವಿಟಮಿನ್‌ಗಳು ಹೃದ್ರೋಗವನ್ನು ತಡೆಗಟ್ಟಲು ಸಹಕರಿಸುತ್ತದೆ.


- ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement