ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶುರುವಾಯ್ತು ಕತ್ತಲೆಯ ಕೋಟಲೆ

ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಸದ್ದಿಲ್ಲದೆ ಜಾರಿಯಾಗಿದ್ದು,

Rashmi Kasaragodu
Updated On : 2 Apr 2014, 1:33 am

ಕನ್ನಡಪ್ರಭ ವಾರ್ತೆ    ಬೆಂಗಳೂರು    ಏ.1

ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಸದ್ದಿಲ್ಲದೆ ಜಾರಿಯಾಗಿದ್ದು, ನಿಧಾನಕ್ಕೆ ಕತ್ತಲು ಆವರಿಸಿಕೊಳ್ಳುತ್ತಿದೆ. ಪರೀಕ್ಷಾ ಕಾಲದಲ್ಲಿ ಯಾವ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದಿದ್ದ ಇಂಧನ ಇಲಾಖೆ  ಅದನ್ನೇ ಹೇರುವ ಸಿದ್ಧತೆ ನಡೆಸಿದೆ.
ಯುಗಾದಿ ದಿನವೂ ಕತ್ತಲೆ ಜೋರಾಗಿತ್ತು. ಶೃಂಗೇರಿಯಂತಹ ಪ್ರಸಿದ್ಧ ಯಾತ್ರಾಸ್ಥಳದಲ್ಲೂ ಅವತ್ತು 6 ತಾಸಿಗೂ ಹೆಚ್ಚು ವಿದ್ಯುತ್ ಖೋತಾ ಮಾಡಲಾಗಿತ್ತು. ಈ ನಡುವೆ ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲೂ 2 ಘಟಕಗಳು ಸ್ಥಗಿತಗೊಂಡಿವೆ. ಸದ್ಯಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ನಿತ್ಯ ಬೆಳಗ್ಗೆ ಮತ್ತು ರಾತ್ರಿ 2ಗಂಟೆ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ನಗರ ಪ್ರದೇಶದಲ್ಲಿ 1ತಾಸು ಮಾಡುತ್ತಿದೆ.
ಪ್ರತಿ ಮಾರ್ಚ್‌ಗೆ ವಿದ್ಯುತ್ ಸರಾಸರಿ ಬಳಕೆ 186 ಮಿಲಿಯನ್ ಯುನಿಟ್. ಆದರೆ ಈ ವರ್ಷ ಬೇಡಿಕೆ 205ಮಿ.ಯು.ಗೆ  ಏರಿದೆ. ಇದನ್ನು ಸರಿದೂಗಿಸಲು ಕೆಪಿಟಿಸಿಎಲ್ ಅನಿವಾರ್ಯವಾಗಿ ಹೆಸ್ಕಾಂಗಳಿಗೆ ವಿದ್ಯುತ್ ಪ್ರಮಾಣ ಕಡಿಮೆ ಮಾಡುತ್ತಿದೆ. ಪರಿಣಾಮವಾಗಿ ಹೆಸ್ಕಾಂಗಳು 2 ತಾಸು ಲೋಡ್‌ಶೆಡ್ಡಿಂಗ್ ಮೂಲಕ ಕೊರತೆ ಸರಿದೂಗಿಸಲಾರಂಭಿಸಿವೆ.




ಆರ್ಟಿಪಿಎಸ್ 3, 8ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 3 ಮತ್ತು 8ನೇ ಘಟಕಗಳು ತಾಂತ್ರಿಕ ದೋಷದಿಂದ ಸೋಮವಾರ ರಾತ್ರಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ.
ವಿದ್ಯುತ್ ಕೇಂದ್ರದ ಮೂರನೇ ಘಟಕದ ಬೇರಿಂಗ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಅದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದು, ಬಿಎಚ್‌ಇಎಲ್‌ನ ತಜ್ಞರು ಈ ಘಟಕದ ಪರಿಶೀಲನೆಗೆ ಆಗಮಿಸಬೇಕಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ದುರಸ್ತಿ ಮತ್ತು ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಕನಿಷ್ಠ ಒಂದೆರಡು ವಾರ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ 8ನೇ ಘಟಕದಲ್ಲಿ ಸಹ ತಾಂತ್ರಿಕ ದೋಷ ಕಂಡುಬಂದಿದ್ದು, ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದು ಬುಧವಾರದ ವೇಳೆಗೆ ವಿದ್ಯುತ್ ಉತ್ಪಾದನೆಗೆ ಪುನಾ ತೊಡಗಿಸುವ ವಿಶ್ವಾಸ ಕೆಪಿಸಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.


ಸದ್ಯಕ್ಕೆ ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಎಲ್ಲಾ ಕಡೆ ಉತ್ತಮ ರೀತಿಯಲ್ಲಿ ವಿದ್ಯುತ್ ಪೂರೈಕೆಯಾಗುತ್ತಿದೆ. ವಿದ್ಯುತ್ ಕಡಿತದ ಬಗ್ಗೆ ಯಾವುದೇ ದೂರುಗಳು ಬರುತ್ತಿಲ್ಲ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.
ಟಿ ಜಿ.ಕುಮಾರನಾಯಕ್
ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement