ಖುದ್ದು ಹಾಜರಿ: ಸ್ಯಾಮ್ಸಂಗ್ ಅಧ್ಯಕ್ಷಗೆ ಸುಪ್ರೀಂ ಸೂಚನೆ
ನವದೆಹಲಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಲೀ ಕುನ್-ಹೀ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಭಾರತದ ಕಂಪನಿಯೊಂದಕ್ಕೆ 8.4 ಕೋಟಿ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ 6 ವಾರಗಳ ಒಳಗಾಗಿ ಗಾಜಿಯಾಬಾದ್ ಕೋರ್ಟ್ಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಕುನ್ ಹೀ ಅವರಿಗೆ ಬುಧವಾರ ಆದೇಶಿಸಿದೆ. ಜತೆಗೆ, ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ಬಂಧನ ವಾರಂಟ್ ಅನ್ನು 6 ವಾರಗಳ ತನಕ ಜಾರಿ ಮಾಡದಿರುವಂತೆಯೂ ಕೋರ್ಟ್ ಸೂಚಿಸಿದೆ. ಜೆಸಿಇ ಕನ್ಸಲ್ಟೆನ್ಸಿ ಎಂಬ ಭಾರತದ ಕಂಪನಿಯೊಂದು ತನಗೆ ಲೀ 8.4 ಕೋಟಿ ವಂಚನೆ ಮಾಡಿರುವುದಾಗಿ ಆರೋಪಿಸಿ ಗಾಜಿಯಾಬಾದ್ ಕೋರ್ಟ್ ಮೆಟ್ಟಿಲೇರಿತ್ತು.