ಸೋನಿಯಾ ಗಾಂಧಿ ಆಸ್ತಿ 6 ಪಟ್ಟು ಹೆಚ್ಚಳ, ಮಗನಿಗೇ ಸಾಲ
ಸೋನಿಯಾ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೆ?
ರಾಯ್ಬರೇಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೆ? ಕೇವಲ 9.28 ಕೋಟಿ!
ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿ ತಮ್ಮ ಆಸ್ತಿ ಘೋಷಿಸಿದ್ದಾರೆ.
ಅಚ್ಚರಿಯೇನೆಂದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪತ್ನಿಯಾಗಿರುವ ಸೋನಿಯಾ ಬಳಿ ಸ್ವಂತದ್ದೊಂದು ಕಾರೂ ಇಲ್ಲ. ಇದಲ್ಲದೆ ಸೋನಿಯಾ ತಮ್ಮ ಪುತ್ರ ರಾಹುಲ್ ಗಾಂಧಿ ಅವರಿಗೇ 9 ಲಕ್ಷವನ್ನು ಸಾಲವಾಗಿ ನೀಡಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ 1.37 ಕೋಟಿ ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದರು.
ಮಗನೇ ಚಾಲಕ ರಾಯ್ಬರೇಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವ ಮುನ್ನ ಸೋನಿಯಾ ಗಾಂಧಿ ಅವರು ರೋಡ್ಶೋ ನಡೆಸಿದರು. ಈ ವೇಳೆ ಪುತ್ರ ರಾಹುಲ್ ಗಾಂಧಿ ಅವರೇ ಸೋನಿಯಾ ಕಾರಿಗೆ ಸಾರಥಿಯಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಳಿಕ ತಾಯಿ ಮತ್ತು ಮಗ ಇಬ್ಬರೂ ಸ್ಥಳೀಯ ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರು ಆಯೋಜಿಸಿದ್ದ ವಿಶೇಷ ಹವನದಲ್ಲಿ ಪಾಲ್ಗೊಂಡರು.
2.81 ಕೋ. ಸ್ಥಿರಾಸ್ತಿ
6.47 ಕೋ.ಮೊತ್ತದ ಚರ ಆಸ್ತಿ
6 ಪಟ್ಟು ಆಸ್ತಿ ಹೆಚ್ಚಳ
9 ಲಕ್ಷ ಸಾಲವಾಗಿ ನೀಡಿಕೆ
85 ಸಾವಿರ ನಗದು
66 ಲಕ್ಷ ಬ್ಯಾಂಕ್ನಲ್ಲಿ
10 ಲಕ್ಷ ಬಾಂಡ್
1.90 ಲಕ್ಷ ಷೇರು
42.49 ಲಕ್ಷ ಪಿಪಿಎಫ್