ಐಆರ್‌ಎನ್‌ಎಸ್‌ಎಸ್ 1ಬಿ ಯಶಸ್ವಿ
ಇಸ್ರೋಗೆ ಮತ್ತೊಂದು ಯಶಸ್ಸು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ತನ್ನ ಎರಡನೇ ದಿಶಾದರ್ಶನ ಉಪಗ್ರಹ...
ಶ್ರೀಹರಿಕೋಟಾ: ಇಸ್ರೋಗೆ ಮತ್ತೊಂದು ಯಶಸ್ಸು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ತನ್ನ ಎರಡನೇ ದಿಶಾದರ್ಶನ ಉಪಗ್ರಹ ಐಆರ್‌ಎನ್‌ಎಸ್‌ಎಸ್ 1ಬಿ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸಿತು.
ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸರಿಯಾಗಿ ಸಂಜೆ 5.14ಕ್ಕೆ ಐಆರ್‌ಎನ್‌ಎಸ್‌ಎಸ್ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ24 ರಾಕೆಟ್ ನಭಕ್ಕೆ ಚಿಮ್ಮಿತು. ಇದಾದ 19 ನಿಮಿಷಗಳಲ್ಲೇ ಬಾಹ್ಯಾಕಾಶ ನೌಕೆಯು ಉಪಗ್ರಹವನ್ನು ಕಕ್ಷೆಗೆ ಸೇರಿಸಿತು.