ಬಿಜೆಪಿ-ಟಿಡಿಪಿ ಮತ್ತೆ ಫ್ರೆಂಡ್ಸ್
ಕೊನೆಗೂ ಬಿಜೆಪಿ ಮತ್ತು ಟಿಡಿಪಿ ಮೈತ್ರಿಗೆ ನಿರ್ಧರಿಸಿವೆ. ಹೈದರಾಬಾದ್ನಲ್ಲಿ ನಡೆದ ಟಿಡಿಪಿ ನಾಯಕರ ಸಭೆಯಲ್ಲಿ ಒಪ್ಪಿಗೆಯ ಮುದ್ರೆಯೊತ್ತಲಾಯಿತು. ವಿಜಯವಾಡ ಹೊರತುಪಡಿಸಿ ಉಳಿದ ಎಲ್ಲ ಸ್ಥಾನಗಳಲ್ಲಿ ಸ್ಪರ್ಧೆ ವಿಚಾರವನ್ನು ಅಂತಿಮಪಡಿಸಲಾಗಿದೆ. ಶೀಘ್ರವೇ ಎರಡೂ ಪಕ್ಷಗಳ ನಾಯಕರು ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2004ರಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಟಿಡಿಪಿ ಕಡಿದುಕೊಂಡಿತ್ತು.