ಯುವತಿಗೆ ಕಿರುಕುಳ: ಸಾರಿಗೆ ನಿರ್ವಾಹಕನಿಗೆ ಥಳಿತ
ಧಾರವಾಡ: ಸಾರಿಗೆ ಸಂಸ್ಥೆ ಬಸ್ನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಯುವತಿ ಚುಡಾಯಿಸಿದ ನಿರ್ವಾಹಕನನ್ನು ಆಕೆಯ ಸಹೋದರ ಥಳಿಸಿದ ಘಟನೆ ಶನಿವಾರ ನಡೆದಿದೆ. ಖಾನಾಪುರ ಡಿಪೋದಲ್ಲಿ 5 ವರ್ಷಗಳಿಂದ ನಿರ್ವಾಹಕನಾಗಿರುವ ಖಾನಾಪುರ ತಾಲೂಕಿನ ಕುಡೆಚೂರ ಗ್ರಾಮದ ನಿವಾಸಿ ಕಲ್ಲಪ್ಪ ಕೋಲ್ಕರ್ ಎಂಬಾತ ಯುವತಿಯನ್ನು ಪೀಡಿಸಿದ್ದಾನೆಂದು ಆರೋಪಿಸಲಾಗಿದೆ. ಅನಾರೋಗ್ಯ ಪೀಡಿತರಾದ ತನ್ನ ತಾಯಿಯನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಿ ಧಾರವಾಡಕ್ಕೆ ಮರಳುತ್ತಿದ್ದ ಯುವತಿ ಜತೆ ನಿರ್ವಾಹಕ ಕಲ್ಲಪ್ಪ ದಾರಿಯುದ್ದಕ್ಕೂ ಅನುಚಿತವಾಗಿ ವರ್ತಿಸಿದ್ದಾನೆ. ಧಾರವಾಡದಲ್ಲಿ ಬಸ್ಸಿಳಿಯುತ್ತಿದ್ದಾಗ ಮೊಬೈಲ್ ನಂಬರ್ ನೀಡುವಂತೆಯೂ ಪೀಡಿಸಿದ್ದಾನೆ. ಇದರಿಂದ ತೀವ್ರ ಮನನೊಂದ ಯುವತಿ ಮನೆಗೆ ಹೋಗಿ, ಸಹೋದರನಿಗೆ ಘಟನೆ ವಿವರಿಸಿದ್ದಾಳೆ. ತಂಗಿಯೊಂದಿಗೆ ಧಾರವಾಡ ನಿಲ್ದಾಣಕ್ಕೆ ಬಂದ ಆತ, ನಿರ್ವಾಹಕನನ್ನು ಥಳಿಸಿದ್ದಾನೆ.