ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಬ್ದ ಮಾಲಿನ್ಯ

ಚುನಾವಣೆಯ ಕಾವು ಏರುತ್ತಿರುವಂತೆಯೇ ನಾಯಕರ ನಾಲಗೆಯ ಬಿಸಿಯೂ ಏರತೊಡಗಿದೆ...

Mainashree
Updated On : 5 Apr 2014, 11:16 am

ಚುನಾವಣೆಯ ಕಾವು ಏರುತ್ತಿರುವಂತೆಯೇ ನಾಯಕರ ನಾಲಗೆಯ ಬಿಸಿಯೂ ಏರತೊಡಗಿದೆ. ಯಾರು ಏನೇ ಮಾಡಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರ, ರಾಜ್ಯ ನಾಯಕರಿಂದ ಶನಿವಾರವೂ ಮುಂದುವರಿದ ವಿವಾದಾತ್ಮಕ ಹೇಳಿಕೆಇದಕ್ಕೆ ಸಾಕ್ಷಿ.

ಪ್ರತೀಕಾರ ತೀರಿಸಿ
ಮೋದಿ ಆಪ್ತ ಸಹಚರ ಅಮಿತ್ ಶಾ  2 ದಿನಗಳ ಹಿಂದೆ ಶಾ ಉತ್ತರ ಪ್ರದೇಶದಲ್ಲಿ ಗುಜ್ಜರ್, ರಜಪೂತ, ದಲಿತ ನಾಯಕರ ಭೇಟಿ ವೇಳೆ, ನೀಡಿದ 'ಪ್ರತೀಕಾರದ'ಹೇಳಿಕೆ ವಿವಾದಕ್ಕೀಡಾಗಿದೆ.  'ನಮ್ಮ ಸಮುದಾಯವ ಅವಮಾನಿಸಿದವರ ಜತೆಗೆ, ನಮ್ಮ ಯುವಕರ ಕೊಂದವರ ಜತೆಗೆ, ಕುಳಿತುಕೊಳ್ಳಲು ನಾವು ಬಯಸುತ್ತೇವೆಯೇ?' ಎಂದು ಅವರು ಪ್ರಶ್ನಿಸಿದ್ದರು.

ಮೋದಿ ಲಫಂಗ
ಮೋದಿ ವಿರುದ್ಧ ಮಾತನಾಡಿ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾನೆ. ಮೋದಿ ಒಬ್ಬ ಲಫಂಗ(ಕೊಲೆಪಾತಕ). ಇತರರನ್ನು ಕೊಲ್ಲುವಂತಹ 'ಟಪೋರಿ'(ಒರಟ) ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಖುರ್ಷಿದ್ ಅಹ್ಮದ್ ಹೇಳಿದ್ದಾರೆ.

ಯಾರು ಕತ್ತರಿಸಲ್ಪಡುತ್ತಾರೆ?
ಇಮ್ರಾನ್ ಮಸೂದ್ ಹೇಳಿಕೆ ಖಂಡಿಸುವ ಭರದಲ್ಲಿ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರೇ ವಿವಾದ ಸೃಷ್ಟಿಸಿದ್ದಾರೆ. ಚುನಾವಣೆ ಮುಗಿಯಲಿ. ಯಾರು ತುಂಡು ತುಂಡಾಗಿ ಕತ್ತರಿಸಲ್ಪಡುತ್ತಾರೆ ಎಂಬುದನ್ನು ನಾವು ನೋಡೋಣ ಎಂದಿದ್ದಾರೆ ರಾಜೇ.


ಸೋನಿಯಾ ದೇಶದ್ರೋಹಿ ಮಗಳು
ಮೈಸೂರು:
ಸೋನಿಯಾ ಗಾಂಧಿ ದೇಶದ್ರೋಹಿ ಸೈನಿಕನೊಬ್ಬನ ಮಗಳು. ಇಂಥವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಆರೋಪಿಸಿ ವಿವಾದ ಸೃಷ್ಟಿಸಿದ್ದಾರೆ.  ಸೋನಿಯಾರಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ. ಮುಖವಾಡ ಮಾತ್ರ ಮನಮೋಹನಸಿಂಗ್ ಅವರದ್ದು. ಆಡಳಿತ ನಡೆಸುತ್ತಿರುವುದು ಸೋನಿಯಾ ಗಾಂಧಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement