ಸಿಎಂಗೆ ಸಂಹಿತೆ ಬಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ...
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ. ಗಂಗಾವತಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ 'ಆಲಿಕಲ್ಲು ಮಳೆಯಿಂದಾದ ಹಾನಿಗೆ ಉತ್ತಮ ಪರಿಹಾರವನ್ನೇ ನೀಡಲಾಗುವುದು' ಎಂದು ಹೇಳಿಕೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದು ರೈತರಿಗೆ ತೋರಿದ ಆಮಿಷ. ಪ್ರಚಾರದ ವೇಳೆ ಸಿಎಂ ಯಾವುದೇ ಭರವಸೆ ನೀಡುವಂತಿಲ್ಲ. ಅಲ್ಲದೆ ಭಾಷಣದ ವೇಳೆ ಕೆಲವು ದೋಷಗಳಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ವಿಡಿಯೋ ಪ್ರತಿ ನೀಡುತ್ತೇವೆ. ಅವರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಈ ಕುರಿತು ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಬಸವರಾಜ್ ತಿಳಿಸಿದ್ದಾರೆ.