ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

40ರ ಪರಿತಾಪ

Mainashree
Updated On : 6 Apr 2014, 11:11 am

ಕನ್ನಡಪ್ರಭ ವಾರ್ತೆ| ಬಳ್ಳಾರಿ|ಏ.6
ಹೈದ್ರಾಬಾದ್-ಕರ್ನಾಟಕದಲ್ಲಿ ಬಿಸಿಲಿನ ತಾಪ 40 ಡಿಗ್ರಿ ತಲುಪಿದ್ದು ಅಭ್ಯರ್ಥಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಸರ್ಕಾರಿ ಅಧಿಕಾರಿಗಳಿಗೂ 'ಬೆವರಿಳಿಸುತ್ತಿದೆ'.
ರಾಜ್ಯದ ಇತರೆಡೆಗೆ ಹೋಲಿಸಿದರೆ, ಹೈದ್ರಾಬಾದ್-ಕರ್ನಾಟಕದಲ್ಲಿ ಬಿಸಿಲ ಬೇಗೆ ಹೆಚ್ಚು. ಈ ಭಾಗದಲ್ಲಿ ಕೆಲಸ ಮಾಡಲು ಬಂದ ಸರ್ಕಾರಿ, ಖಾಸಗಿ ನೌಕರರು, ಅಧಿಕಾರಿಗಳು ಬಿಸಿಲಿನ ಕಾಟ ತಾಳದೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಆದರೆ, ಈಗ ಚುನಾವಣೆ ಇರುವುದರಿಂದ ಅನಿವಾರ್ಯವಾಗಿ ಉರಿ ಬಿಸಿಲಿನಲ್ಲೇ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಭಾಗದಲ್ಲಿ ಏ.1ರಿಂದ ಮೇ 31ರವರೆಗೆ ಸರ್ಕಾರಿ ಕಚೇರಿಗಳ ಸಮಯವನ್ನು ಬೆಳಗ್ಗೆ 8.30ರಿಂದ ಮಧ್ಯಾಹ್ನ 1.30 ಎಂದು ಬದಲಿಸಲಾಗುತ್ತಿತ್ತು. ಚುನಾವಣೆ ಸಲುವಾಗಿ ಈ ಬಾರಿ ಇಂಥ ಸೌಲಭ್ಯವೂ ಇಲ್ಲ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement