ಕಣದಲ್ಲಿ ಮಾಜಿ ಸಿಎಂಗಳು!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 12ಕ್ಕೂ ಹೆಚ್ಚು ಮಾಜಿ ಮುಖ್ಯಮಂತ್ರಿಗಳು ಕಣದಲ್ಲಿರುವುದು ವಿಶೇಷ
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 12ಕ್ಕೂ ಹೆಚ್ಚು ಮಾಜಿ ಮುಖ್ಯಮಂತ್ರಿಗಳು ಕಣದಲ್ಲಿರುವುದು ವಿಶೇಷ. ಕರ್ನಾಟಕದಿಂದ ಆರು, ಉತ್ತರಾಖಂಡದಿಂದ ಮೂರು ಮತ್ತು ಜಾರ್ಖಂಡ್ ಮತ್ತು ಬಿಹಾರ ಹಾಗೂ ಒಡಿಶಾದಿಂದ ತಲಾ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರಾದ ರಾಜನಾಥ್ಸಿಂಗ್, ಸುಷ್ಮಾಸ್ವರಾಜ್, ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ನ ಗುಲಾಂನಬಿ ಆಜಾದ್, ಸುಶೀಲ್ ಕುಮಾರ್ ಶಿಂದೆ, ಅಶೋಕ್ ಚವ್ಹಾಣ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಪ್ರಮುಖರು. ಇದಲ್ಲದೆ ಹಾಲಿ ಮುಖ್ಯಮಂತ್ರಿಗಳಾದ ನರೇಂದ್ರಮೋದಿ ಹಾಗೂ ನಾಗಾಲ್ಯಾಂಡ್ನ ನೈಫಿಯು ರಿಯೋ ಕೂಡ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಇತರೆ ಮಾಜಿ ಸಿಎಂಗಳು
- ವೀರಪ್ಪ ಮೊಯ್ಲಿ- ಕಾಂಗ್ರೆಸ್
- ಸದಾನಂದಗೌಡ- ಬಿಜೆಪಿ
- ಕುಮಾರಸ್ವಾಮಿ- ಜೆಡಿಎಸ್
- ಎಚ್.ಡಿ. ದೇವೇಗೌಡ- ಜೆಡಿಎಸ್
- ಧರ್ಮಸಿಂಗ್- ಕಾಂಗ್ರೆಸ್
- ಬಿ.ಸಿ. ಖಂಡೂರಿ- ಬಿಜೆಪಿ
- ಶಿಬು ಸೊರೇನ್- ಜೆಎಂಎಂ
- ಭಗತ್ ಸಿಂಗ್ ಕೊಶಾಯಿರಿ- ಬಿಜೆಪಿ
- ಪೋಕ್ರಿಯಾಲ್ ನಿಶಾಂಕ್- ಬಿಜೆಪಿ
- ಶಾಂತ ಕುಮಾರ್- ಹಿಮಾಚಲ ಪ್ರದೇಶ
- ಬಾಬು ಲಾಲ್ ಮೊರಾಂಡಿ- ಜೆವಿಎಂಪಿ
- ರಾಮ್ ಸುಂದರ್ ದಾಸ್- ಜೆಡಿಯು
- ರಾಮ್ ವಿಲಾಸ್ ಪಾಸ್ವಾನ್- ಎಲ್ಜೆಪಿ
- ಹೇಮಾನಂದ ಬಿಸ್ವಾಲ್- ಕಾಂಗ್ರೆಸ್
- ಗಿರಿಧರ್ ಗಮಾಂಗ್- ಕಾಂಗ್ರೆಸ್
- ಪಿ.ಎ. ಸಂಗ್ಮಾ- ಎನ್ಪಿಪಿ
- ಶಂಕರಸಿನ್ಹಾ ವಘೇಲಾ- ಕಾಂಗ್ರೆಸ್
- ಅಜಿತ್ ಜೋಗಿ- ಕಾಂಗ್ರೆಸ್