ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಧಾನಿ ಸಿಂಗ್‌ರನ್ನು ಸ್ವಾಗತಿಸಲು ಮೋತಿಲಾಲ್ ನೆಹರೂ ರಸ್ತೆಯ ಬಂಗಲೆ ಸಿದ್ಧ

ಪ್ರಧಾನಿ ಸಿಂಗ್‌ರನ್ನು ಸ್ವಾಗತಿಸಲು ಮೋತಿಲಾಲ್ ನೆಹರೂ ರಸ್ತೆಯ ಬಂಗಲೆ ಸಿದ್ಧ

Mainashree
Updated On : 7 Apr 2014, 10:19 am

ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ನಿವೃತ್ತಿ ನಂತರದ ಬಂಗಲೆಗೆ ಶಿಫ್ಟ್ ಆಗಲಿದ್ದಾರೆಯೇ?
ಹೌದು. ಚುನಾವಣೆಯ ಫಲಿತಾಂಶಕ್ಕೂ ಕಾಯದೇ ತಮ್ಮ ಹೊಸ ಬಂಗಲೆಯತ್ತ ನಡೆಯಲು ಪ್ರಧಾನಿ ಸಿಂಗ್ ಮುಂದಾಗಿದ್ದಾರೆ ಎನ್ನಲಾಗಿದೆ. 10 ವರ್ಷಗಳ ಕಾಲ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದ ಸಿಂಗ್ ಅವರಿಗಾಗಿ ದೆಹಲಿಯ ಮೋತಿಲಾಲ್ ನೆಹರೂ ರಸ್ತೆಯಲ್ಲಿ ನಾಲ್ಕು ಬೆಡ್‌ರೂಂಗಳಿರುವ ಬೃಹತ್ ಬಂಗಲೆ ಕಾಯುತ್ತಿದೆ. ತಮ್ಮ ಪತ್ನಿ ಗುರುಶರಣ್ ಕೌರ್ ಅವರೊಂದಿಗೆ ಸಿಂಗ್ ಅವರು ತಮ್ಮ ನಿವೃತ್ತಿ ನಂತರದ ಜೀವನವನ್ನು ಇದೇ ಬಂಗಲೆಯಲ್ಲಿ ಕಳೆಯಲಿದ್ದಾರೆ.
ಶೀಲಾ ಇದ್ದ ಬಂಗಲೆ: ಈ ಮೊದಲು ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರು ಈ ಬಂಗಲೆಯಲ್ಲಿ ವಾಸವಿದ್ದರು. ಇದು 3 ಮೋತಿಲಾಲ್ ನೆಹರೂ ರಸ್ತೆಯಲ್ಲಿ 3.5 ಎಕರೆ ವಿಸ್ತಾರದ ಜಾಗದಲ್ಲಿದೆ. ಫೆಬ್ರವರಿಯಲ್ಲಿ ಶೀಲಾ ಬಂಗಲೆಯನ್ನು ತೆರವು ಮಾಡಿದ್ದರು. ನಂತರ ಪ್ರಧಾನಿ ಸಿಂಗ್ ಅವರಿಗಾಗಿ ಇದನ್ನು ಮೀಸಲಿಡಲು ನಿರ್ಧರಿಸಲಾಯಿತು.  

30ರೊಳಗೆ ದುರಸ್ತಿ ಪೂರ್ಣ
ಏ. 30ರೊಳಗೆ ಬಂಗಲೆ ದುರಸ್ತಿ ಪೂರ್ಣಗೊಳಿಸಲು ಪ್ರಧಾನಿ ಕಾರ್ಯಾಲಯ ಸಿಪಿಡಬ್ಲ್ಯೂಡಿಗೆ ಸೂಚಿಸಿದೆ. ಈ ಮೂಲಕ ಪ್ರಧಾನಿ ಶೀಘ್ರ ಶಿಫ್ಟ್ ಆಗುವ ಸುಳಿವು ಸಿಕ್ಕಿದೆ. ಸದ್ಯ ಸಿಂಗ್ 7 ರೇಸ್‌ಕೋರ್ಸ್ ರಸ್ತೆಯಲ್ಲಿದ್ದಾರೆ.

1920ರ ಬಂಗಲೆ
1920ರಲ್ಲಿ ಈ ಬಂಗಲೆ ನಿರ್ಮಿಸಲಾಗಿತ್ತು. ಮುಂದೆ ಜೀವವೈವಿಧ್ಯ ಉದ್ಯಾನವೂ ಇದೆ. ಸುಮಾರು 35 ಲಕ್ಷ ವೆಚ್ಚದಲ್ಲಿ ಬಂಗಲೆಯ ನೆಲ, ಚಾವಣಿಗೆ ಬಣ್ಣ ಹಚ್ಚುವ, ಪ್ಲಾಸ್ಟರ್ ರಿಪೇರಿ ಮಾಡುವ ಕೆಲಸವನ್ನು ನಡೆಸಲಾಗುತ್ತಿದೆ.

ಭದ್ರತಾ ವ್ಯವಸ್ಥೆ
ವಿಶೇಷ ಭದ್ರತಾ ದಳ ಆಗಲೇ ಬಂಗಲೆ ಪರಿಶೀಲಿಸಿದೆ. ಭದ್ರತಾ ಅಗತ್ಯದ ಬಗ್ಗೆ ಶೀಘ್ರ ಎಸ್‌ಪಿಜಿ ಪಟ್ಟಿ ಒದಗಿಸಲಿದ್ದು, ಅದಕ್ಕನುಗುಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಲೆ ಇರುವುದೆಲ್ಲಿ?
3 ಮೋತಿಲಾಲ್ ನೆಹರೂ ರಸ್ತೆ

ನಿರ್ಮಾಣ 1920
ನಿರ್ಮಾಣ 3.5 ಎಕರೆ
ನವೀಕರಣ ವೆಚ್ಚ ರು. 35 ಲಕ್ಷ
ಬೆಡ್‌ರೂಂಗಳು 4
ದುರಸ್ತಿ ಕಾರ್ಯಪೂರ್ಣ ಯಾವಾಗ? ಏ. 30

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement