ಪ್ರಭಾವಿ ಪಟ್ಟಿಯಲ್ಲಿ ಮೋದಿ, ರಾಹುಲ್
ಲಂಡನ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತಿತರರು ಟಾಪ್ 5 ಪ್ರಭಾವಿ ಏಷ್ಯನ್ನರ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. 2014ರ ಟಾಪ್ 100 ಪ್ರಭಾವಿ ಏಷ್ಯನ್ನರ ಪಟ್ಟಿಯನ್ನು ಏಷ್ಯನ್ ಅವಾರ್ಡ್ಸ್ ಲಿಮಿಟೆಡ್ ಪ್ರಕಟಿಸಿದೆ. ಇದರಲ್ಲಿ ಟಾಪ್ 1 ಸ್ಥಾನವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮೋದಿ 4ನೇ ಸ್ಥಾನದಲ್ಲಿದ್ದರೆ, ರಾಹುಲ್ 5 ಮತ್ತು ಪ್ರಧಾನಿ ಸಿಂಗ್ 6ನೇ ಸ್ಥಾನ ಪಡೆದಿದ್ದಾರೆ.