ತಿವಾರಿಗೆ ಸಿಕ್ಕಿತು ಜಾಮೀನು
ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ತೆಗಳಿದ ಪ್ರಕರಣದಲ್ಲಿ ಕೇಂದ್ರ ಸಚಿವ ಮನೀಷ್ ತಿವಾರಿಗೆ ಜಾಮೀನು...
ಮುಂಬೈ: ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ತೆಗಳಿದ ಪ್ರಕರಣದಲ್ಲಿ ಕೇಂದ್ರ ಸಚಿವ ಮನೀಷ್ ತಿವಾರಿಗೆ ಜಾಮೀನು ಸಿಕ್ಕಿದೆ. 2010ರಲ್ಲಿ ಗಡ್ಕರಿ ಅವರು ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ಅಕ್ರಮವಾಗಿ ಅಪಾರ್ಟ್ಮೆಂಟ್ ಪಡೆದಿದ್ದರು ಎಂದು ತಿವಾರಿ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿ ತಿವಾರಿ ಕಾಂಗ್ರೆಸ್ ವಕ್ತಾರರಾಗಿದ್ದರು. ಈ ಹೇಳಿಕೆಯಿಂದ ಕ್ರುದ್ಧರಾಗಿದ್ದ ಗಡ್ಕರಿ ಮುಂಬೈನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದರ ವಿಚಾರಣೆ ನಡೆಸಿದ ಕೋರ್ಟ್ ತಿವಾರಿಗೆ ಜಾಮೀನು ನೀಡಿದೆ.