ಬೇಹುಗಾರಿಕೆಯ ಹಳೇ ರಾಗಾ
ರಾಜ್ಯದ ಮೂರು ಕಡೆಗಳಲ್ಲಿ ಪ್ರಚಾರ ನಡೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ...
ಬೆಂಗಳೂರು/ಶಿರಸಿ/ರಾಯಚೂರು
ರಾಜ್ಯದ ಮೂರು ಕಡೆಗಳಲ್ಲಿ ಪ್ರಚಾರ ನಡೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರು ನಡೆಸಿದ್ದಾರೆ ಎನ್ನಲಾದ ಬೇಹುಗಾರಿಕೆ ಪ್ರಕರಣವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾತನಾಡಿದ ರಾಹುಲ್, ಬಿಜೆಪಿಯವರು ಮಹಿಳೆಗೆ ರಕ್ಷಣೆ ಕೊಡುತ್ತೇವೆ ಎಂದು ಜಾಹೀರಾತು ನೀಡುತ್ತಾರೆ. ಆದರೆ ಗುಜರಾತ್‌ನಲ್ಲಿ ಮಹಿಳೆ ಮೇಲೆ ಬೇಹುಗಾರಿಕೆ ನಡೆಸುತ್ತಾರೆ. ಮಹಿಳೆಯರ ಮೇಲೆ ಗೌರವ ಮತ್ತು ಭರವಸೆ ಇಲ್ಲದವರು ಮಾತ್ರ ಇಂಥ ಕೃತ್ಯ ಎಸಗುತ್ತಾರೆ ಎಂದು ಮೋದಿ ಹೆಸರು ಹೇಳದೆ ವ್ಯಂಗ್ಯವಾಡಿದರು. ಕರ್ನಾಟಕದಲ್ಲಿ ಸಚಿವರೊಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜಿನಾಮೆ ನೀಡಿದ್ದರು. ಅದೇ ಸರ್ಕಾರದ ಸಚಿವರು ಅಧಿವೇಶನದಲ್ಲಿ ನೀಲಿಚಿತ್ರ ನೋಡಿದ್ದರು. ಇಂಥವರಿಂದ ಮಹಿಳಾ ಸಶಕ್ತೀಕರಣ ಸಾಧ್ಯವೇ ಎಂದು ಪ್ರಶ್ನಿಸಿದರು.