ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡರ ಅಂತ್ಯಕ್ರಿಯೆ

ಅಪಾರ ಅಭಿಮಾನಿಗಳ ಶೋಕದ ನಡುವೆ ಮಾಜಿ ಶಾಸಕ...

Mainashree
Updated On : 8 Apr 2014, 1:16 am

ಮೈಸೂರು: ಅಪಾರ ಅಭಿಮಾನಿಗಳ ಶೋಕದ ನಡುವೆ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಹೆಬ್ಬಾಳಿನ ಜೆ.ಕೆ. ಟೈರ್ಸ್ ಸಮೀಪ ಕುಟುಂಬಕ್ಕೆ ಸೇರಿದ್ದ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿತು. ಗೌಡರ ಹಿರಿಯ ಪುತ್ರ ಹಾಗೂ ನಗರ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು. ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತಪಟ್ಟ ಶಂಕರಲಿಂಗೇಗೌಡರ ಪಾರ್ಥಿವ ಶರೀರವನ್ನು 1.30ರ ಸುಮಾರಿನಲ್ಲಿ ಅವರ ಹುಟ್ಟೂರಾದ ಹೆಮ್ಮಿಗೆಗೆ ಕೊಂಡೊಯ್ದು ಕೆಲಕಾಲ ಇರಿಸಲಾಯಿತು. ಬೆಳಗಿನ ಜಾವ 4.15ರ ಸುಮಾರಿಗೆ ಮೈಸೂರಿನ ಅವರ ನಿವಾಸದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ನಾಗರಿಕರು, ಗೌಡರ ಅಭಿಮಾನಿಗಳು ಆಗಮಿಸಿ, ರಾಜಕಾರಣಿಗಳು, ಗಣ್ಯವ್ಯಕ್ತಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement