ಕತ್ತಲೆ ಕವಿಯೋದಿಲ್ಲ ಬರ ಬಾಧಿಸೋದಿಲ್ಲ
ಕನ್ನಡಪ್ರಭ ವಾರ್ತೆ , ಬೆಂಗಳೂರು , ಏ.22
ರಾಜ್ಯದ ಜಲಾಶಯಗಳಲ್ಲಿ ಇನ್ನೂ 70 ದಿನ ವಿದ್ಯುತ್ ಉತ್ಪಾದನೆಗೆ ಆಗುವಷ್ಟು ನೀರಿನ ಸಂಗ್ರಹವಿದ್ದು, ಲೋಡ್ ಶೆಡ್ಡಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂಧನ ಇಲಾಖಾಧಿಕಾರಿಗಳ ಜತೆ ಮಂಗಳವಾರ ಚರ್ಚಿಸಿದ ಅವರು, ರಾಜ್ಯ ದಲ್ಲಿ ಹತ್ತಾರು ವರ್ಷಗಳಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಿತ್ತು. ಆದರೆ ಈ ವರ್ಷ ಚಿಂತೆ ಬೇಡ. ಬೇಡಿಕೆಗಿಂತ ಹೆಚ್ಚು ವಿದ್ಯುತ್ ಪೂರೈಕೆ ಇದೆ ಎಂದರು.
ಲೋಡ್ ಶೆಡ್ಡಿಂಗ್ ಸಮಸ್ಯೆ ಇಲ್ಲ. ತಾಂತ್ರಿಕ ಕಾರಣಕ್ಕೆ ಕೆಲವೆಡೆ ತೊಂದರೆಯಾಗಿರಬಹುದು. ಏಪ್ರಿಲ್ 3, 4ರಂದು ಕೆಲವೆಡೆ ವಿದ್ಯುತ್ ಕೊರತೆ ಆಗಿದ್ದು ಬಿಟ್ಟರೆ ಇನ್ನೆಲ್ಲೂ ಸಮಸ್ಯೆಯಾಗಿಲ್ಲ. ನಮ್ಮಲ್ಲಿ 208 ಮಿಲಿಯನ್ ಯುನಿಟ್ ಪೂರೈಕೆಯಾಗುತ್ತಿದ್ದು, 168 ಮಿಲಿಯನ್ ಯುನಿಟ್ ಬೇಡಿಕೆ ಇದೆ ಎಂದರು.
ಕೃಷಿ ಕ್ಷೇತ್ರದ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಹಳ್ಳಿಗಳಲ್ಲಿ 18 ಗಂಟೆ, ನಗರ ದಲ್ಲಿ ನಿರಂತರ 24 ಗಂಟೆ ಪೂರೈಕೆಯಾಗುತ್ತಿದೆ. ರೈತರಿಗೆ 7 ಗಂಟೆ 3 ಪೇಸ್ ಭರ ವಸೆಗೆ ತಪ್ಪಿ ನಡೆದಿಲ್ಲ ಎಂದರು.
ಮಾರ್ಚ್‌ನಲ್ಲಿ ಇಂಧನ ಇಲಾಖೆಯ ಸೆಕ್ಷನ್ 11ರ ಅಡಿ ಅಧಿಕಾರ ಚಲಾಯಿಸಿ 650 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಸಲಾಗಿದೆ. ಜತೆಗೆ 450 ಮೆಗಾ ವ್ಯಾಟ್ ಪವನ ವಿದ್ಯುತ್ ಪೂರೈಕೆಯಾಗಿದೆ
ಸಂಬಂಧವಿಲ್ಲ: ವಿದ್ಯುತ್ ಬೆಲೆ ಏರಿಕೆ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ಕ್ರಮ ತೆಗೆದುಕೊಳ್ಳುತ್ತದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.
70 ದಿನ ವಿದ್ಯುತ್ ಉತ್ಪಾದನೆಗೆ ಅಗತ್ಯ ನೀರಿನ ಸಂಗ್ರಹ
208 ಮಿಲಿಯನ್ ಯುನಿಟ್ ಪೂರೈಕೆ
168 ಮಿಲಿಯನ್ ಯುನಿಟ್ ಬೇಡಿಕೆ
7 ಗಂಟೆ ರೈತರಿಗೆ 3 ಪೇಸ್ ವಿದ್ಯುತ್