ಬೆಂಗಳೂರಿನ ಆಧಾರ್ ಕೇಂದ್ರಕ್ಕೆ ಐಎಸ್‌ಎಫ್ ಭದ್ರತೆ
ನವದೆಹಲಿ: ಬೆಂಗಳೂರಿನಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಎಐ)ದ ಡಾಟಾ ಸೆಂಟರ್‌ಗೆ ಸಿಐಎಸ್‌ಎಫ್ ಕಮಾಂಡೋ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
'ಆಧಾರ್' ಕೇಂದ್ರ ಬೆಂಗಳೂರಿನ ಹೆಬ್ಬಾಳದಲ್ಲಿದ್ದು ಪ್ರಸ್ತುತ ಅದರ ಭದ್ರತೆಯನ್ನು ಖಾಸಗಿ ಭದ್ರತಾ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಹಲವಾರು ರಾಜ್ಯಗಳ ಜನರ ಆಧಾರ್ ಮಾಹಿತಿಯನ್ನು ಸಂಗ್ರಹಿಸಿಡಲಾಗಿದೆ. ಈ ಕೇಂದ್ರದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಬಗ್ಗೆ ಸರ್ಕಾರದ ಸೂಕ್ಷ್ಣ ಕಟ್ಟಡಗಳಿಗೆ ಭದ್ರತೆ ಒದಗಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯೊಂದಿಗೆ ಗೃಹ ಸಚಿವಾಲಯ ಚರ್ಚಿಸಿದೆ. ಮೂಲಗಳ ಪ್ರಕಾರ, ಹೆಬ್ಬಾಳದ ಆಧಾರ್ ಡಾಟಾ ಕೇಂದ್ರಕ್ಕೆ ಸುಮಾರು 100ರಷ್ಟು ಕಮಾಂಡೋಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಸಿಐಎಸ್‌ಎಫ್ ನಿಯೋಜನೆ ಸಂಬಂಧದ ಅಂತಿಮ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ತೆಗೆದುಕೊಳ್ಳಲಿದೆ.