ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಂದಿನ ಹಂಗಾಮು ಮಳೆ ಕಮ್ಮಿ

ಬೇಸಿಗೆ ನೀರಿನ ಕೊರತೆ ನಡುವೆಯೇ ಮುಂದಿನ ಹಂಗಾಮು ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ...

Mainashree
Updated On : 24 Apr 2014, 12:31 pm

ಬೆಂಗಳೂರು: ಬೇಸಿಗೆ ನೀರಿನ ಕೊರತೆ ನಡುವೆಯೇ ಮುಂದಿನ ಹಂಗಾಮು ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು   ಕೈಕೊಡುವ ಸಾಧ್ಯತೆಯಿದೆ.  ದೇಶದ ಬಹುಭಾಗಕ್ಕೆ ಮಳೆ ಕೊರತೆ ಕಾಡಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ ತಿಳಿಸಿದೆ. ದೇಶದ ಮುಕ್ಕಾಲು ಭಾಗ ಕಡಿಮೆ ಮಳೆಯಾಗಲಿದೆ. ಶೇ.20 ಭಾಗ ತೀವ್ರ ಬರದಿಂದ ಬಳಲುವ ಸಾಧ್ಯತೆಯಿದೆ. ಆಂಧ್ರ, ಬಂಗಾಳ ಹಾಗೂ ಈಶಾನ್ಯ ಭಾರತ ಹೊರತುಪಡಿಸಿ ಉಳಿ ದೆಡೆ ಕಡಿಮೆ ಮಳೆ ಸಂಭವ.
ಕೇಂದ್ರ ಹವಾಮಾನ ಇಲಾಖೆ ನೇತೃತ್ವದಲ್ಲಿ ಪುಣೆಯಲ್ಲಿ ಬುಧವಾರ ಅಂತ್ಯಗೊಂಡ ಕಾರ್ಯಾಗಾರದಲ್ಲಿ ಈ  ಮುನ್ಸೂಚನೆ ನೀಡಲಾಗಿದೆ.  ನಕಾಶೆ ಪ್ರಕಾರ ಉತ್ತರ, ಮಧ್ಯ ಕರ್ನಾಟಕ ಹಾಗೂ ಬಯಲು ಸೀಮೆ ರಾಜ್ಯಗಳಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗಲಿದೆ. ಉಳಿದೆಡೆ 60 ಸೆಂ.ಮೀಗಿಂತಲೂ ಕಡಿಮೆ ವರ್ಷಧಾರೆಯಾಗಲಿದೆ.
ವರದಿ ಪ್ರಕಾರ ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ 210 ಸೆಂ.ಮೀಗೂ ಅಧಿಕ ಮಳೆ.  ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ಅತಿ ಕಡಿಮೆ ಮಳೆ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement