ಹೌದು, 60 ವರ್ಷದಿಂದ ಗಟ್ಟಿ ಆಗಿದ್ದು ಗಾಂಧಿ ಕುಟುಂಬ ಮಾತ್ರ
ವಿರೋಧಿಗಳು ಟೀಕೆ ಮಾಡಿದಷ್ಟೂ ಗಾಂಧಿ ಕುಟುಂಬ ಗಟ್ಟಿಯಾಗು...
ಕಲೋಲ್(ಗುಜರಾತ್): ವಿರೋಧಿಗಳು ಟೀಕೆ ಮಾಡಿದಷ್ಟೂ ಗಾಂಧಿ ಕುಟುಂಬ ಗಟ್ಟಿಯಾಗುತ್ತಾ ಹೋಗುತ್ತದೆ ಎನ್ನುವ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಕಳೆದ 60 ವರ್ಷಗಳಿಂದಲೂ ಗಾಂಧಿ ಕುಟುಂಬ ಗಟ್ಟಿಯಾಗುತ್ತಲೇ ಇದೆ. ಆದರೆ, ಈಗ ದೇಶವನ್ನು ಬಲಿಷ್ಠಗೊಳಿಸುವ ಕಾಲ ಬಂದಿದೆ ಎಂದಿದ್ದಾರೆ ಮೋದಿ.
ಟಿ ನೀವು (ಗಾಂಧಿ ಕುಟುಂಬ) ಬಲಿಷ್ಠವಾಗುತ್ತಾ ಹೋಗುತ್ತಿದ್ದೀರಿ ಎಂದು ಹೇಳುತ್ತೀರಿ. ನೀವು 60 ವರ್ಷದಿಂದ ಬಲಿಷ್ಠವಾಗುತ್ತಲೇ ಇದ್ದೀರಿ. ಈಗ ನಮ್ಮ ಮುಂದಿರುವ ಪ್ರಶ್ನೆ ದೇಶವನ್ನು ಹೇಗೆ ಗಟ್ಟಿ ಮಾಡುವುದು ಎನ್ನುವುದು.
ಮೋದಿ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸಿ: ಜೇಟ್ಲಿ
ಅಮೃತಸರ: ವೈವಾಹಿಕ ಬದುಕು ಸೇರಿದಂತೆ ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಅನೇಕ ವೈಯಕ್ತಿಕ ವಿಚಾರಗಳ ಕುರಿತು ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸಿಗರು ಅದನ್ನು ನಿಲ್ಲಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಆಗ್ರಹಿಸಿದ್ದಾರೆ. 'ವೈಯಕ್ತಿಕ ಟೀಕೆ ನಿಲ್ಲಿಸಿ' ಎನ್ನುವ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಉತ್ತರವಾಗಿ ಜೇಟ್ಲಿ ಈ ವಿಚಾರ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಹೇಳುವುದನ್ನು ಒಪ್ಪಿಕೊಳ್ಳುತ್ತೇನೆ. ಈ ಸಲಹೆಯ ಕುರಿತು ಆಕೆಯ ಕುಟುಂಬ ಮತ್ತು ಪಕ್ಷ ಲಕ್ಷ್ಯ ಕೊಡುತ್ತದೆ ಎನ್ನುವ ವಿಶ್ವಾಸ ಇದೆ. ಪ್ರಿಯಾಂಕಾ ಹೇಳಿದಂತೆ ರಾಜಕೀಯದಲ್ಲಿ ವೈಯಕ್ತಿಕ ಟೀಕೆ ಸರಿಯಲ್ಲ. ಆದರೆ, ವಾದ್ರಾರ ಭೂ ಅಕ್ರಮ ವೈಯಕ್ತಿಕ ವಿಚಾರವಲ್ಲ ಎಂದೂ ಇದೇ ವೇಳೆ ಜೇಟ್ಲಿ ಹೇಳಿದ್ದಾರೆ.