ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೇಶದ ಏಕೈಕ ಗೊರಿಲ್ಲಾ ಪೋಲೋ ಇನ್ನಿಲ್ಲ

Mainashree
Updated On : 27 Apr 2014, 10:36 am

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ದೇಶದ ಏಕೈಕ ಗೊರಿಲ್ಲಾ ಪೋಲೋ (41) ಅನಾರೋಗ್ಯದಿಂದ ಶನಿವಾರ ರಾತ್ರಿ ಮೃತಪಟ್ಟಿದೆ.
ಪೋಲೋ 1973ರಲ್ಲಿ ಸ್ವಾಭಾವಿಕ ಅರಣ್ಯ ಪ್ರದೇಶದಲ್ಲಿ ಜನಿಸಿದ್ದು, ಅದನ್ನು ಜರ್ಮನಿಯ ಲೀಪ್‌ಜಿಗ್ ಮೃಗಾಲಯಕ್ಕೆ ತರಲಾಗಿತ್ತು. 1974ರಿಂದ 1992ರವರೆಗೆ ಅಲ್ಲಿದ್ದ ಪೋಲೋನನ್ನು ಐರ್ಲೆಂಡ್‌ನ ಡಬ್ಲಿನ್ ಮೃಗಾಲಯಕ್ಕೆ ನೀಡಲಾಗಿತ್ತು. ಇಇಪಿ ಸಂಸ್ಥೆ ಹಾಗೂ ಅದರ ನಿರ್ದೇಶಕರ ಶಿಫಾರಸಿನಂತೆ ಡಬ್ಲಿನ್ ಮೃಗಾಲಯದವರು ಮೈಸೂರು ಮೃಗಾಲಯಕ್ಕೆ 1995ರಲ್ಲಿ ಹಸ್ತಾಂತರಿಸಿದ್ದರು.
ಒಂಟಿತನ ಮುಳುವಾಯಿತೇ?: 1995ರಲ್ಲಿ ಮೈಸೂರು ಮೃಗಾಲಯಕ್ಕೆ ಬಂದಿದ್ದ ಪೋಲೋ 18 ವರ್ಷ ಒಂಟಿತನದ ಜೀವನ ನಡೆಸಿದುದರ ಫಲವಾಗಿ ಹೀಗೆ ಅನಾರೋಗ್ಯಕ್ಕೆ ತುತ್ತಾಗಿದೆ ಎಂದು ಊಹಿಸಲಾಗಿದೆ. ಇದಕ್ಕೆ ಸ್ನಾನ ಮಾಡುವುದೆಂದರೆ ತುಂಬಾ ಖುಷಿ. ಜತೆಗೆ ತಿನ್ನಲು ಕಬ್ಬು, ಹಣ್ಣು, ಕಾಳು ಬಳಸುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement