ನ್ಯಾ. ಕೆ.ಪಿ.ಇಂದಿರಾಗೆ ಅನಂತನ ಆಡಳಿತ
ತಿರುವನಂತಪುರ: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಿರುವನಂತಪುರ 'ಅನಂತ' ದೇಗುಲದ ಆಡಳಿತದ ಹೊಣೆಯನ್ನು ನ್ಯಾಯಾಧೀಶೆ ಕೆ.ಪಿ. ಇಂದಿರಾ ವಹಿಸಿಕೊಂಡಿದ್ದಾರೆ.
ತಿರುವಾಂಕೂರು ರಾಜಮನೆತನದ ಅಧೀನದಲ್ಲಿದ್ದ ಪದ್ಮನಾಭಸ್ವಾಮಿ ದೇಗುಲದ ಆಡಳಿತದ ಹೊಣೆಯನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದ 5 ಮಂದಿ ಸದಸ್ಯರ ತಂಡ ವಹಿಸಬೇಕು ಎಂದು ಗುರುವಾರವಷ್ಟೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ, ಶನಿವಾರ ಸಂಜೆ ದೇಗುಲದ ಹೊಸ ಆಡಳಿತಾತ್ಮಕ ಸಮಿತಿಯ ನೇತೃತ್ವವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಪಿ. ಇಂದಿರಾ ವಹಿಸಿಕೊಂಡಿದ್ದಾರೆ. ಇದೇ ವೇಳೆ, ಹಿರಿಯ ಐಎಎಸ್ ಅಧಿಕಾರಿ ಕೆ.ಎನ್. ಸತೀಶ್ ಅವರನ್ನು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೋರ್ಟ್ ನೇಮಕ ಮಾಡಿದೆ.