ಸಿಎಂ ಹುದ್ದೆ ಮೇಲೆ ಶಿವಕುಮಾರ್ ಕಣ್ಣು?
'ಅನೇಕರನ್ನು ಬೆಳೆಸಿದ್ದೀರಿ. ಅವರೆಲ್ಲಾ ಸಮುದಾಯದ ಶಕ್ತಿಯ ಮೇಲೆಯೆ...
ಬೆಂಗಳೂರು: 'ಅನೇಕರನ್ನು ಬೆಳೆಸಿದ್ದೀರಿ. ಅವರೆಲ್ಲಾ ಸಮುದಾಯದ ಶಕ್ತಿಯ ಮೇಲೆಯೆ ಉನ್ನತ ಅಧಿಕಾರ ಅನುಭವಿಸಿಯೂ ಆಗಿದೆ. ಈಗ ಉಳಿದವನು ನಾನೊಬ್ಬನೇ. ನಮ್ಮ ಹುಡುಗ ಎನ್ನುವ ಪ್ರೀತಿ, ಬೆಂಬಲವಿರಲಿ. ಸಂದರ್ಭ ಬಂದಾಗ ನೀವೆಲ್ಲ ನನಗೆ ಬೆಂಬಲ ನೀಡಿ. ಒಂದು ಅವಕಾಶ ಕೊಟ್ಟು ನೋಡಿ... ಪೆನ್ನು-ಹಾಳೆ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ತೋರಿಸುತ್ತೇನೆ'.
ಇದು ಇಂಧನ ಸಚಿವ ಶಿವಕುಮಾರ್ ಅವರ ಮಾತು. ರಾಜ್ಯ ಒಕ್ಕಲಿಗರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, 'ಸಂದರ್ಭ ಬಂದಾಗ ಬೆಂಬಲ ನನಗೆ ನೀಡಿ' ಎಂದು ಹೇಳುವ ಮೂಲಕ ಫಲಿತಾಂಶದ ನಂತರ ಎಲ್ಲವೂ ಹೀಗೆಯೇ ಇರುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಸಿಎಂ ಆಗುವ ಇಂಗಿತವನ್ನೂ ತೋರಿದ್ದಾರೆ.