ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಗದಾಳ್ ಘಾಟಿ ಬಳಿ ಅಪಘಾತ: 3 ಸಾವು

Mainashree
Updated On : 27 Apr 2014, 10:19 am

ಕೊಪ್ಪ:  ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ 13 ರ ಸಿಗದಾಳ್ ಘಾಟಿ ಬಳಿ ನಡೆದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತ ಪಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಿದ ನಂತರ ಇನ್ನೂಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಬವಿಸಿದೆ.
ಕೊಪ್ಪ ಪಟ್ಟಣ ಸಮೀಪದ ಕೌರಿ ಗುಡ್ಡದ ನಿವಾಸಿ ಶ್ರೀಧರ್ (27) ಮತ್ತು ಅವನ ಸಂಬಂಧಿಕರ ಮಗಳು ಸಿಂಚನ(10), ಹಾಗೂ ಸ್ನೇಹಿತ ಗಿರೀಶ್(28)  ಇವರುಗಳು ಪಲ್ಸರ್ ಬೈಕ್‌ನಲ್ಲಿ ಹರಿಹರಪುರ ಮಾರ್ಗವಾಗಿ ಸೋಮೆಶ್ವರಕ್ಕೆ ತೆರಳು ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಇನೋವಾ ಡಿಕ್ಕಿ: ಸಿಗಾದಳ್ ಘಾಟಿ ಬಳಿ ಟಾರ್ ಮಿಕ್ಸ್‌ರ್ ತುಂಬಿದ ಲಾರಿಯನ್ನು ಹಿಂದೆ ಹಾಕಿ ಬೈಕ್ ಸವಾರರು ಹೋಗುತ್ತಿರುವಾಗ ಹಿಂಭಾಗದಿಂದ ಅತೀ ವೇಗದಲ್ಲಿ ಬಂದ ಇನೋವಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಚಾಲಕ ನಿಯಂತ್ರಣ ತಪ್ಪಿ ಬೈಕ್ ಲಾರಿ ಅಡಿ ಬಿದ್ದರಿಂದ ಶ್ರೀಧರ್ ಹಾಗೂ ಸಿಂಚನ ಸ್ಥಳ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಗಿರೀಶ್‌ರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಸೇರಿಸಲಾಯಿತಾದರು ಬದುಕುಳಿಯಲಿಲ್ಲ.
 ಬೈಕ್‌ಗೆ ಡಿಕ್ಕಿ ಹೊಡೆದ ಕಪ್ಪು ಬಣ್ಣದ ಇನೋವಾ ಕಾರು ಪರಾರಿಯಾಗಿದ್ದು, ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ತೀರ್ಥಹಳ್ಳಿಯ ಶೇಷಗಿರಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಪೊಲೀಸರು ಇನೋವಾ ಕಾರು  ಹಾಗೂ ಲಾರಿ ಚಾಲಕನಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ.
 ಈ ಸಂಬಂದ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement