ಆಲಿಕಲ್ಲು ಹಾನಿ; ವಿಪತ್ತು ಪ್ರದೇಶ
ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು 'ವಿಪತ್ತು ಪೀಡಿತ' ಎಂದು...
ಬೆಂಗಳೂರು: ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು 'ವಿಪತ್ತು ಪೀಡಿತ' ಎಂದು ಘೋಷಿಸುವುದೂ ಸೇರಿದಂತೆ ಮಹತ್ವದ ಆಡಳಿತಾತ್ಮಕ ನಿರ್ಣಯಗಳನ್ನು ರಾಜ್ಯ ಸಂಪುಟ ಸಭೆ ಕೈಗೊಂಡಿದೆ.
ಕಸ್ತೂರಿ ರಂಗನ್ ವರದಿಗೆ ಅಸ್ತು
ಕಸ್ತೂರಿ ರಂಗನ್ ವರದಿಯ 36 ಶಿಫಾರಸುಗಳ ಪೈಕಿ ಕೆಲವನ್ನು ಬಿಟ್ಟು ಉಳಿದ ಅಂಶಗಳಿಗೆ ಒಪ್ಪಿಗೆ. ಸಂಪುಟ ಉಪಸಮಿತಿ ವರದಿಯಲ್ಲಿ ಹೇಳಿರುವ 1580 ಜೈವಿಕ ಸೂಕ್ಷ್ಮ ಹಳ್ಳಿಗಳ ಪೈಕಿ 850 ಹಳ್ಳಿಗಳು ಮಾತ್ರ ಪಟ್ಟಿಗೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತ. ಆದರೆ, ಸ್ಥಳೀಯ ಅಗತ್ಯಕ್ಕೆ ಅನುಗುಣ ಕಲ್ಲು, ಮರುಳು ಗಣಿಗಾರಿಕೆಗೆ ಒಪ್ಪಿಗೆ ನೀಡಲು ಕೇಂದ್ರಕ್ಕೆ ಮನವಿ.
ವಿಪತ್ತು ಪೀಡಿತ ಪ್ರದೇಶ
ಆಲಿಕಲ್ಲಿನಿಂದ ಹಾನಿಗೊಳಗಾದ ಪ್ರದೇಶಗಳ ರೈತರ ಕೃಷಿ ಸಾಲದ ಬಡ್ಡಿ ಮನ್ನಾ, ಅವಧಿ ಸಾಲವಾಗಿ ಕೃಷಿ ಸಾಲ ಪರಿವರ್ತನೆ. ಹಾನಿಗೊಳಗಾದ ಪ್ರದೇಶದ ಒಂದು ಹೆಕ್ಟೇರ್‌ಗೆ ಮಾತ್ರ ಪರಿಹಾರ. ಮಳೆ ಆಶ್ರಿತ ಪ್ರದೇಶಕ್ಕೆ ರು. 15000, ನೀರಾವರಿಗೆ ರು. 25,000, ಬಹು ವಾರ್ಷಿಕ ಬೆಳೆಗೆ 40,000.
ಸ್ವಯಂ ಪ್ರಮಾಣಪತ್ರ
ವಿವಿಧ ಇಲಾಖೆಗಳ ಸೇವೆ ಪಡೆಯಲು ನೀಡುತ್ತಿದ್ದ ಜಾತಿ, ಆದಾಯ ಹಾಗೂ ಇತರೆ ಪ್ರಮಾಣಪತ್ರಗಳ ಬದಲು ಸ್ವಯಂ ದೃಢೀಕರಣ ಪತ್ರ ವ್ಯವಸ್ಥೆ. 24 ಇಲಾಖೆಗಳಿಂದ ಸಮ್ಮತಿ. ಮುಂದಿನ 2 ತಿಂಗಳೊಳಗೆ ಪ್ರಮಾಣ ಪತ್ರ ಮಾದರಿ ರಚಿಸಲು ಸೂಚನೆ. ತಪ್ಪು ಮಾಹಿತಿ ನೀಡಿದವರಿಗೆ 6 ತಿಂಗಳು ಶಿಕ್ಷೆ, ಗರಿಷ್ಠ 7 ವರ್ಷ ಸಜೆ ವಿಧಿಸಲು ಅವಕಾಶ.