ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೆಜಿಎಫ್ ಶಾಸಕಿ ರಾಮಕ್ಕ ವಿರುದ್ಧದ ಲೋಕಾಯುಕ್ತ ತನಿಖೆ ರದ್ದು

Mainashree
Updated On : 28 Apr 2014, 11:05 am

ಬೆಂಗಳೂರು: ಕೆಜಿಎಫ್ ಶಾಸಕಿ ರಾಮಕ್ಕ ಅವರ ವಿರುದ್ಧದ ಲೋಕಾಯುಕ್ತ ತನಿಖೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಕ್ರಮ ಭೂ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಶಾಸಕಿ ರಾಮಕ್ಕ ವಿರುದ್ಧ ಬೀರಪ್ಪ ಎಂಬುವವರು ದೂರು ಸಲ್ಲಿಸಿದ್ದರು. ಖಾಸಗಿ ದೂರು ಆಧರಿಸಿ ಸ್ಥಳೀಯ ಲೋಕಾಯುಕ್ತ ಕೋರ್ಟ್ ತನಿಖೆ ನಡೆಸುವಂತೆ ಬೇತಮಂಗಲ ಪೊಲೀಸರಿಗೆ ಆದೇಶಿಸಿತ್ತು.
ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ರಾಮಕ್ಕ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.  ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ. ಪಿಂಟೋ ಅವರ ಏಕಸದಸ್ಯ ನ್ಯಾಯಪೀಠ, ಬೇತಮಂಗಲ ಪೊಲೀಸರು ಹಾಗೂ ಖಾಸಗಿ ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ. ರಾಮಕ್ಕ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿದ್ದರೂ ಉಳಿದ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. ಇದರೊಂದಿಗೆ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ಬೇತಮಂಗಲದಲ್ಲಿ 1 ಎಕರೆ 24 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಶಾಸಕಿ ರಾಮಕ್ಕ ಖರೀದಿಸಿದ್ದಾರೆ. ಶ್ರೀರಾಮ ರೆಡ್ಡಿ ಎಂಬ ಅಪರಿಚಿತ ಅಥವಾ ನೈಜವಾಗಿ ಬದುಕಿಲ್ಲದ ವ್ಯಕ್ತಿಯ ಹೆಸರಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಭೂಮಿಯ ವಾರಸುದಾರ ಬೀರಪ್ಪ ಅವರು ದೂರು ಸಲ್ಲಿಸಿದ್ದರು. ಶ್ರೀರಾಮರೆಡ್ಡಿ ಯಾರೆಂಬುದು ತಿಳಿದಿಲ್ಲ, ರಾಮಕ್ಕ ಅವರೇ ಅಕ್ರಮವಾಗಿ ಭೂಮಿ ಖರೀದಿಸಿದ್ದಾರೆ ಎನ್ನುವುದು ದೂರುದಾರರ ಆರೋಪವಾಗಿತ್ತು.
ದೂರು ಆಧರಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಆದೇಶಿಸಿತ್ತು. ಲೋಕಾಯುಕ್ತ ಕೋರ್ಟ್‌ನ ಆದೇಶ ಪ್ರಶ್ನಿಸಿ, ತನಿಖೆಯಿಂದ ತಮ್ಮನ್ನು ಕೈಬಿಡುವಂತೆ ರಾಮಕ್ಕ ಕೋರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement