ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತ್ತೆ ವಾಗ್ಯುದ್ಧ

ಲೋಕಸಭೆ ಚುನಾವಣೆ ಅಂತಿಮ ಸುತ್ತು ತಲುಪುತ್ತಿದ್ದಂತೆ ನಾನಾ ಪಕ್ಷಗಳ...

Mainashree
Updated On : 28 Apr 2014, 10:54 am

ನವದೆಹಲಿ: ಲೋಕಸಭೆ ಚುನಾವಣೆ ಅಂತಿಮ ಸುತ್ತು ತಲುಪುತ್ತಿದ್ದಂತೆ ನಾನಾ ಪಕ್ಷಗಳ ಮುಖಂಡರು ಮತ್ತೊಂದು ಸುತ್ತಿನ ಕೆಸರೆರಚಾಟ ಆರಂಭಿಸಿದ್ದಾರೆ. ಕೆಲವರಿಗೆ ಸೋಲುವ ಭೀತಿ, ಇನ್ನು ಕೆಲವರು ಗೆಲವಿನ ಹಪಾಹಪಿಯಲ್ಲಿ ಬಡಬಡಿಸಿದ್ದಾರೆ.

ಫಾರುಕ್ ಕುಟುಂಬ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಕಾಶ್ಮೀರದ ಈಗಿನ ದುಸ್ಥಿತಿಗೆ ಅವರೇ ಕಾರಣ. ಸೂಫಿವಾದ, ಸಾಮರಸ್ಯಕ್ಕೆ ಹೆಸರುವಾಸಿಯಾದ ನಾಡಿನಿಂದ ಪಂಡಿತರನ್ನು ಓಡಿಸಿದವರಿಗೆ ಮಾತನಾಡುವ ಹಕ್ಕಿಲ್ಲ.
- ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ

ನಾನು ದಲಿತರ ಮನೆಗೆ ಭೇಟಿ ನೀಡಿದಾಗಲೆಲ್ಲ ಮೋದಿ ಏನಾದರೊಂದು ಗೇಲಿ ಮಾಡುತ್ತಾರೆ. ಆದರೆ, ಅದಾನಿಯಂಥ ಶ್ರೀಮಂತರ ಮನೆಯಲ್ಲಿ ಊಟ ಮಾಡುವ ಮೋದಿ ದಲಿತರ ಮನೆಯಲ್ಲಿ ಉಂಡದ್ದು ನನಗೆ ನೆನಪಿಲ್ಲ.
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಮೋದಿ ಷರಿಯಾ ಕಾನೂನನ್ನು ಮೂಲೆಗುಂಪು ಮಾಡಿ ಏಕರೀತಿಯ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಲು ಇಚ್ಛಿಸಿದ್ದಾರೆ. ಇದು ಮುಸ್ಲಿಮರು ಒಪ್ಪುವಂಥದ್ದಲ್ಲ.
- ಫಾರೂಕ್ ಅಬ್ದುಲ್ಲಾ, ಕೇಂದ್ರ ಸಚಿವ

ಮೋದಿಯೊಬ್ಬ ರಾಕ್ಷಸ. ಅವರಿಗೆ ರಾಜಕೀಯದಲ್ಲಿರುವ ಅರ್ಹತೆಯೇ ಇಲ್ಲ. ಗಲಭೆ ಸೃಷ್ಟಿಕರ್ತರಿಂದ ಅಭಿವೃದ್ಧಿ ಪಾಠ ಕೇಳುವ ಅಗತ್ಯ ಇಲ್ಲ. ಪ್ರಧಾನಿಯಾದರೆ ದೇಶ ಕಗ್ಗತ್ತಲ ಖಂಡ.
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ನನ್ನ ಚಲನವಲನಗಳ ಮೇಲೆ ಮೋದಿ ಕಣ್ಣಿಟ್ಟಿದ್ದಾರೆ ಎನ್ನುವುದನ್ನು ಕೇಳಿ ಸಂತೋಷವಾಯಿತು. ಇದರ ಅರ್ಥ ಅವರು ಮಹಿಳೆಯರ ಮೇಲಷ್ಟೇ ಅಲ್ಲ ಇತರರ ಮೇಲೂ ಬೇಹುಗಾರಿಕೆ ನಡೆಸುತ್ತಾರೆ.
- ಅಹ್ಮದ್ ಪಟೇಲ್, ಕಾಂಗ್ರೆಸ್ ಮುಖಂಡ

ಮೋದಿ ಪ್ರಧಾನಿಯಾಗಲು ಬಯಸುತ್ತಿದ್ದಾರೆ. ಆದರೆ, ಅವರಿಗೆ ಕಾಶ್ಮೀರಕ್ಕೆ ಕಾಲಿಡುವಷ್ಟು ಧೈರ್ಯವಿಲ್ಲ. ಕಾಶ್ಮೀರದ ಜನರ ಹೃದಯದಲ್ಲಿ ಮೋದಿಗೆ ಜಾಗ ಇದೆ ಎಂದು ಅನಿಸುವುದಿಲ್ಲ.
-ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಸಿಎಂ

ಮೋದಿ ಹೆಸರಿನ ಪೂರ್ಣರೂಪ ನಿಮಗೆ ಗೊತ್ತಿರಲಿಕ್ಕಿಲ್ಲ. 'ಮೋದಿ' ಅಂದರೆ ಭಾರತವನ್ನು ವಿಭಜಿಸುವ ಮಾದರಿ. ಮೋದಿ ದೇಶವನ್ನು ಜಾತಿ, ಧರ್ಮದ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ.
-ಅಖಿಲೇಶ್ ಯಾದವ್, ಉತ್ತರಪ್ರದೇಶ ಸಿಎಂ

ಪ್ರಿಯಾಂಕಾ ಬಿಜೆಪಿಯನ್ನು ಗಲಿಬಿಲಿಗೊಂಡ ಇಲಿಗಳಿಗೆ ಹೋಲಿಸಿದ್ದಾರೆ. ನನ್ನ ಕುಟುಂಬದವರೇ ವಿರೋಧಿಗಳನ್ನು ಇಲಿ, ಸರೀಸೃಪಗಳಿಗೆ ಹೋಲಿಸಿದರೆ ನನಗೆ ಖಂಡಿತಾ ಬೇಸರವಾಗುತ್ತದೆ.
- ಅರುಣ್ ಜೇಟ್ಲಿ, ಬಿಜೆಪಿ ಹಿರಿಯ ಮುಖಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement