ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿಗೆ ಹವಾಲಾ ಲಿಂಕ್: ಕಾಂಗ್ರೆಸ್ ಆರೋಪ

ರಾಬರ್ಟ್ ವಾದ್ರಾ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ತಿರುಗೇಟು...

Mainashree
Updated On : 28 Apr 2014, 10:35 am

ನವದೆಹಲಿ: ರಾಬರ್ಟ್ ವಾದ್ರಾ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೂ ಗುಜರಾತ್ ಹವಾಲಾ ಹಗರಣಕ್ಕೂ ಸಂಬಂಧ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜತೆಗೆ, ಮೋದಿಗಿರುವ ಹವಾಲಾ ಸಂಪರ್ಕದ ಫೋಟೋ ಹಾಗೂ ಸಿ.ಡಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಸೂರತ್ ಮತ್ತು ಅಹಮದಾಬಾದ್‌ನ ಜಾರಿ ನಿರ್ದೇಶನಾಲಯವು ಹವಾಲಾ ಆಪರೇಟರ್ ಅಫ್ರೋಜ್ ಫಟ್ಟಾ ಮನೆ ಮೇಲೆ ದಾಳಿ ನಡೆಸಿದೆ. ಇದು 700 ಕೋಟಿ ಹವಾಲಾ ಹಗರಣ. ಅಫ್ರೋಜ್ ಫಟ್ಟಾ ಬಿಜೆಪಿಯ ಬೆಂಬಲಿಗ. ಮೋದಿ ಮತ್ತು ಬಿಜೆಪಿಯ ಹಲವು ಮುಖಂಡರ ಜತೆ ಈತ ನಿಕಟ ಸಂಬಂಧ ಹೊಂದಿದ್ದಾನೆ. ಮೋದಿ ಜತೆಗೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅವರ ಮನೆಗೂ ಹೋಗಿ ಬರುತ್ತಾನೆ. ಈ ಕುರಿತು ಮೋದಿ ವೆಬ್‌ಸೈಟ್‌ನಲ್ಲೇ ಫೊಟೋಗಳಿವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜ್ರೇವಾಲಾ ಆರೋಪಿಸಿದ್ದಾರೆ.
ಭೂಗತ ಜಗತ್ತಿನ ಸಂಪರ್ಕ: ಹವಾಲಾ ಮಾತ್ರವಲ್ಲದೆ ಮೋದಿ ಅವರಿಗೆ ಭೂಗತ ಜಗತ್ತಿನ ಸಂಪರ್ಕವೂ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಡಾನ್ ಬಬ್ಲು ಶ್ರೀವಾಸ್ತವಗೂ ಮೋದಿಗೂ ಏನು ಸಂಬಂಧ? ಈ ಕುರಿತು ವಿವರಣೆ ನೀಡಲು ಮೋದಿ ಸಿದ್ಧರಿದ್ದಾರಾ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement