ಜನ ನಿಮ್ಮನ್ನು ಕಡಿದು ಹಾಕ್ತಾರೆ ಹುಷಾರ್!
'ಕುಡಿಯವ ನೀರಿನ ಯೋಜನೆಗಳಿಗೆ ತೊಂದರೆ ಮಾಡಿದಲ್ಲಿ ಜನ ಸುಮ್ನೆ ಬಿಡಲ್ಲ...
ಕೋಲಾರ: 'ಕುಡಿಯವ ನೀರಿನ ಯೋಜನೆಗಳಿಗೆ ತೊಂದರೆ ಮಾಡಿದಲ್ಲಿ ಜನ ಸುಮ್ನೆ ಬಿಡಲ್ಲ. ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ. ಇಲ್ಲದಿದ್ದರೆ ಜನ ಸಾಲಾಗಿ ನಿಲ್ಲಿಸಿ ಕಡಿದು ಹಾಕ್ತಾರೆ...!'
ಜಿಪಂ ಕಚೇರಿಯಲ್ಲಿ ಬರ ಪರಿಸ್ಥಿತಿ ಚರ್ಚೆಯಲ್ಲಿ ಶಾಸಕ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.
ಹೊಸದಾಗಿ ಕೊರೆಸಿರುವ ಬೋರ್ವೆಲ್ಗಳಿಗೆ ವಿದ್ಯುತ್ ನೀಡಲು ಬೆಸ್ಕಾಂ ವಿಳಂಬ ಮಾಡುತ್ತಿದೆ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಜೊತೆಗೆ ಕೆಲವೆಡೆ ತಾ.ಪಂ. ಇಒಗಳು ಕುಡಿಯುವ ನೀರಿಗಾಗಿ ವಿದ್ಯುತ್ ಬಳಕೆ ಮಾಡಿಕೊಂಡರೂ ಬೆಸ್ಕಾಂ ಅಧಿಕಾರಿಗಳು ಪಿಡಿಒಗಳ ಮೇಲೆ ಕಳವಿನ ಆರೋಪ ಹೊರಿಸಿದ್ದಾರೆ ಎಂಬ ಆರೋಪ ಕೇಳಿಬಂತು.
ಇದರಿಂದ ಕುಪಿತರಾದ ಶಾಸಕ ರಮೇಶ್ಕುಮಾರ್, 'ವಿದ್ಯುತ್ ಕದಿಯುವ ಕಳ್ಳರನ್ನು ಬಿಟ್ಟು ಜನರಿಗೆ ನೀರು ಕೊಡುವ ಪಿಡಿಒಗಳ ಮೇಲೆ, ನಗರಸಭೆ ಆಯುಕ್ತರ ಮೇಲೆ ನಿಮ್ಮ ಪೌರುಷ ತೋರಿದ್ರೆ ಹೇಗೆ? ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಜನ ನಿಮ್ಮನ್ನು ಸುಮ್ನೆ ಬಿಡಲ್ಲ, ಸಾಲಾಗಿ ನಿಲ್ಲಿಸಿ ಕಡಿಯುತ್ತಾರೆ' ಎಂದು ಎಚ್ಚರಿಸಿದರು.