ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಮ್‌ದೇವ್‌ರಿಂದ ದಲಿತರ ಕಾಲಿಗೆರಗುವ ಫೋಟೊ ಬಿಡುಗಡೆ

'ಹನಿಮೂನ್‌' ಹೇಳಿಕೆ ನೀಡಿ ಬಂಧನ ಭೀತಿ ಎದುರಿಸುತ್ತಿರುವ..

Mainashree
Updated On : 30 Apr 2014, 11:39 am

ಶಿಮ್ಲಾ: 'ಹನಿಮೂನ್‌' ಹೇಳಿಕೆ ನೀಡಿ ಬಂಧನ ಭೀತಿ ಎದುರಿಸುತ್ತಿರುವ ಯೋಗಗುರು ಬಾಬಾ ರಾಮ್‌ದೇವ್ ಈಗ ತನ್ನನ್ನು ಸಮರ್ಥಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಸೋಮವಾರ ಚುನಾವಣಾ ಆಯೋಗದ ನಿಷೇಧ ಉಲ್ಲಂಘಿಸಿ ಹಿಮಾಚಲಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಮ್‌ದೇವ್ ಮಂಗಳವಾರವೂ ಚಾಂಬಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಜತೆಗೆ ಇಲ್ಲಿ ಕೆಲವು ಫೋಟೋಗಳು ಹಾಗೂ ಪತ್ರಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ತಾನು ದಲಿತರ ಕಾಲಿಗೆರಗುತ್ತಿರುವ ಫೋಟೋಗಳು, ವಿಡಿಯೋಗಳನ್ನು ಬಿಡುಗಡೆ ಮಾಡಿದ ರಾಮ್‌ದೇವ್, ನಾನು ಯಾವತ್ತೂ ದಲಿತರಿಗೆ ಅವಮಾನ ಮಾಡಿಲ್ಲ. ನಾನು ಅವರಿಗಾಗಿ ಏನೆಲ್ಲಾ ಮಾಡಿದ್ದೇನೆ. ನನ್ನ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಾನು ದಲಿತರನ್ನು ಗೌರವಿಸುತ್ತೇನೆ. ಅವರಿಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ರಾಜ್ಯದಲ್ಲಿ ನನಗೆ ಶಿಬಿರ ಆಯೋಜಿಸಲೂ ಅವಕಾಶ ಕಲ್ಪಿಸುತ್ತಿಲ್ಲ. ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದೂ ರಾಮ್‌ದೇವ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement