ಕ್ಯೂ ತಪ್ಪಿಸಿದ ಚಿರುಗೆ ಮಂಗಳಾರತಿ
ಕ್ಯೂತಪ್ಪಿಸಿ ಮತಚಲಾಯಿಸಲು ಹೋಗಿದ್ದ ಚಿರಂಜೀವಿಗೆ ಯುವಕನೊಬ್ಬ ಪಾಠ ಕಲಿಸಿದ್ದಾನೆ.
ಹೈದರಾಬಾದ್: ಖ್ಯಾತ ನಟ, ಕೇಂದ್ರ ಸಚಿವ ಅನ್ನುವ ಗೈರತ್ತಿನಿಂದಾಗಿ ಕ್ಯೂತಪ್ಪಿಸಿ ಮತಚಲಾಯಿಸಲು ಹೋಗಿದ್ದ ಚಿರಂಜೀವಿಗೆ ಯುವಕನೊಬ್ಬ ಪಾಠ ಕಲಿಸಿದ್ದಾನೆ.
ಕುಟುಂಬದ ಸಮೇತ ಮತಕೇಂದ್ರಕ್ಕೆ ಆಗಮಿಸಿದ್ದ ಚಿರು ಕ್ಯೂತಪ್ಪಿಸಿ ಮುಂದೆ ಹೋಗಿದ್ದರು. ಇದನ್ನು ಗಮನಿಸಿದ ಎನ್ಆರ್ಐ ಯುವಕನೊಬ್ಬ ತಗಾದೆ ತೆಗೆದ. 'ನಾವೆಲ್ಲ ಒಂದೂವರೆ ಗಂಟೆಯಿಂದ ನಿಂತಿದ್ದೇವೆ. ಇಂಥ ದಿನ ಕೂಡ ನೀವು ವಿಶೇಷ ಸೌಲಭ್ಯ ಹೇಗೆ ನಿರೀಕ್ಷಿಸುತ್ತೀರಿ' ಎಂದು ಪ್ರಶ್ನಿದ್ದಾನೆ. ಇದಕ್ಕೆ ಇತರರಿಂದಲೂ ಬೆಂಬಲ ವ್ಯಕ್ತವಾಗಿದೆ. ಮುಜುಗರಕ್ಕೊಳಗಾದ ಚಿರು ಅನಿವಾರ್ಯವಾಗಿ ಕೊನೆಗೆ ನಿಲ್ಲಬೇಕಾಯಿತು.
ಚಿರು ಸ್ಪಷ್ಟನೆ ್ಟ: ತಮ್ಮ ವರ್ತನೆಗೆ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಚಿರು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೆಸರು ಮತದಾರರಪಟ್ಟಿಯಲ್ಲಿ ಇದೆಯೋ, ಇಲ್ವೋ ಎಂಬುದನ್ನು ಪರಿಶೀಲಿಸಲು ನೇರವಾಗಿ ಬೂತಿಗೆ ತೆರಳಿದ್ದೆ. ಎಂದು ತಿಪ್ಪೆಸಾರಿಸಿದ್ದಾರೆ ಚಿರು.
ನೀವೂ ಹೀಗೆ ಮಾಡಿ
ಹೈದರಾಬಾದ್ ಯುವಕನ ನಿಲುವು ಇತರರಿಗೂ ಮಾದರಿ. ಈ ನೆಲದ ಕಾನೂನು ಜನಸಾಮಾನ್ಯರಿಗಷ್ಟೇ ಅಲ್ಲ ಗಣ್ಯರಿಗೂ ಅನ್ವಯ. ಇದಕ್ಕಾಗಿ ಜನ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ದೇಶದಲ್ಲಿ ಮತದಾರನೇ ಪ್ರಭು ಎನ್ನುವುದನ್ನು ಮತ್ತೆ ನಿರೂಪಿಸುವಂತಾಗಬೇಕು.