ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಡ್ತಿಗಾಗಿ ಶಾಸಕರ ವಿರುದ್ಧ ವಿವಾದ ಸೃಷ್ಟಿಸಿದ ಅಧಿಕಾರಿಗಳು!

Mainashree
Updated On : 30 Apr 2014, 10:24 am

ಕನ್ನಡಪ್ರಭ ವಾರ್ತೆ  ಬೆಂಗಳೂರು ಏ 30
ವಿಧಾನ ಮಂಡಲದ ಭರವಸೆ ಸಮಿತಿ ಸದಸ್ಯರ ವಿದೇಶ ಪ್ರವಾಸ ವದಂತಿ ಹರಡುವುದಕ್ಕೆ ಕಾರಣವೇನು?
ಬಡ್ತಿಗಾಗಿ ಅಧಿಕಾರಿಗಳ ನಡುವಿನ ಆಂತರಿಕ ಯುದ್ಧ ಈ ಬಾರಿ ಶಾಸಕರ ವಿರುದ್ಧ ಅನಗತ್ಯ ವಿವಾದ ಏಳುವುದಕ್ಕೆ ಕಾರಣವಾಗಿದೆ.
ಹೌದು. ವಿಧಾನಸಭೆಯ ಹೆಚ್ಚುವರಿ ಕಾರ್ಯದರ್ಶಿ ಮಂಜುನಾಥ್ ಅವರು ಬುಧವಾರ ನಿವೃತ್ತಿಗೊಂಡಿದ್ದಾರೆ. ಅವರ ಹುದ್ದೆಗಾಗಿ ಸಚಿವಾಲಯದ ಇಬ್ಬರು ಜಂಟಿ ಕಾರ್ಯದರ್ಶಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಹೀಗಾಗಿ ಅವರ ಬೆಂಬಲಿಗರು ಈ ಸುದ್ದಿ ಹರಡಿಸಿ ನಿರ್ದಿಷ್ಟ ಅಧಿಕಾರಿಯೊಬ್ಬರ ವಿರುದ್ಧ ಶಾಸಕರು ಸಿಟ್ಟು ಮಾಡಿಕೊಳ್ಳಲಿ ಎಂದು ಈ ವದಂತಿ ಹಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಭರವಸೆ ಸಮಿತಿ ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳುತ್ತಿಲ್ಲ ಎಂದು ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ಹೊಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಇದು ವಿದೇಶ ಪ್ರವಾಸಕ್ಕೆ ಹೋಗುವುದಕ್ಕೆ ಸೂಕ್ತ ಕಾಲವಲ್ಲ. ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿರಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement