ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತಗಟ್ಟೆ ಹೊರಗೆ ಬಿಜೆಪಿ ಚಿಹ್ನೆ ಪ್ರದರ್ಶಿಸಿದ ಮೋದಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತಗಟ್ಟೆ ಹೊರಗೆ ಪಕ್ಷದ ಚಿಹ್ನೆ ಪ್ರದರ್ಶಿಸಿ ಆಯೋಗದ ಕೆಂಗಣ್ಣಿಗೆ..

Mainashree
Updated On : 1 May 2014, 5:04 am

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತಗಟ್ಟೆ ಹೊರಗೆ ಪಕ್ಷದ ಚಿಹ್ನೆ ಪ್ರದರ್ಶಿಸಿ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಾಗಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಎರಡು ವರ್ಷದ ವರೆಗಿನ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಗಾಂಧಿನಗರದಲ್ಲಿ ಮತ ಚಲಾಯಿಸಿದ ಬಳಿಕ ಪಕ್ಷದ ಚಿಹ್ನೆ ಕಮಲ ಪ್ರದರ್ಶಿಸಿದ್ದಲ್ಲದೇ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಮೋದಿ. ಇದನ್ನು ನೇರ ಪ್ರಸಾರ ಮಾಡಿದ ಚಾನೆಲ್ ವಿರುದ್ಧವೂ ಎಫ್‌ಐಆರ್ ದಾಖಲಿಸುವಂತೆ ಗುಜರಾತ್ ಆಡಳಿತಕ್ಕೆ ಆಯೋಗ ನಿರ್ದೇಶನ ನೀಡಿತ್ತು. ಅದರಂತೆ ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.  ಈ ನಡುವೆ, ಮತಚಲಾಯಿಸಿದ ಬಳಿಕ ಫೋಟೋವನ್ನು ಮೋದಿ ಟ್ವಿಟರ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಅವರ ಈ ನಡೆ ಕೂಡ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿತ್ತು.

ಶಾಂತಿಯುತ ಮತದಾನ
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿರುವ ಏಳನೇ ಹಂತದ ಲೋಕಸಭಾ ಚುನಾವಣೆ ಬುಧವಾರ ಬಹುತೇಕ ಶಾಂತಿಯುತವಾಗಿ ನಡೆಯಿತು. ಏಳು ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಭರ್ಜರಿ ಮತದಾನವಾಗಿದೆ.

ಪ. ಬಂಗಾಳದ
9 ಸ್ಥಾನ
81.35ರ್

ಪಂಜಾಬ್
13 ಸ್ಥಾನ
73ರ್

ಗುಜರಾತ್
26 ಸ್ಥಾನ
ಬಿಹಾರ
7 ಸ್ಥಾನ
60ರ್

ತೆಲಂಗಾಣ
17 ಸ್ಥಾನ
70ರ್

ಉ. ಪ್ರದೇಶ
14 ಸ್ಥಾನ
57.10ರ್

ಕೇಂದ್ರಾಡಳಿತ ಪ್ರದೇಶ
ದಾದ್ರಾ,ನಗರ್ ಹವೇಲಿ
85ರ್

ದಾಮನ್ ದಿಯು
76ರ್

ಜಮ್ಮು ಮತ್ತು ಕಾಶ್ಮೀರದ
25.62ರ್ ನೀರಸ
ಮತದಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement