ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೇವು 5ಕ್ಕೆ ಅಧಿಕಾರಿಗಳ ಸಭೆ

Mainashree
Updated On : 30 Apr 2014, 11:19 am

ಬೆಂಗಳೂರು: ಪಶುಗಳ ಮೇವು ಸಮಸ್ಯೆ ಕುರಿತಂತೆ 'ಕನ್ನಡಪ್ರಭ'ದ ವರದಿಗೆ ಸ್ಪಂದಿಸಿರುವ ಸರ್ಕಾರ ಈ ಕುರಿತು ಮೇ 5ರಂದು ಅಧಿಕಾರಿಗಳ ಸಭೆ ಕರೆಯಲು ತೀರ್ಮಾನಿಸಿದೆ.
ಈ ಬಗ್ಗೆ ಸಚಿವ ಟಿ.ಬಿ. ಜಯ ಚಂದ್ರ ಪ್ರತಿಕ್ರಿಯಿಸಿದ್ದು, ರಾಜ್ಯದ ಹಳೆಯ ಮೈಸೂರು ಭಾಗದಲ್ಲಿ ಮಳೆ ಸಮಸ್ಯೆಯಿಂದ ಮೇವು ಸಮಸ್ಯೆ ಉದ್ಭವಿಸಿರುವುದು ನಿಜ. ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಗೋಶಾಲೆ ತೆರೆಯಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮೇವು ಸಮಸ್ಯೆ, ಕೊರತೆ ಬಗ್ಗೆ ಸಮಗ್ರವಾಗಿ ಚರ್ಚಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಮೇ 5ಕ್ಕೆ ಕರೆಯಲಾಗಿದೆ' ಎಂದಿದ್ದಾರೆ.
ರಾಜ್ಯದಲ್ಲಿ ಬಹುತೇಕ ಜಿಲ್ಲೆ, ತಾಲೂಕುಗಳಲ್ಲಿ ಮೇವು ಇದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೇವು ಕೊರತೆ ಅಷ್ಟು ತೀವ್ರವಾಗಿಲ್ಲ. ಮುಂಗಾರು ನಂತರವೂ ಮಳೆ ಬಂದಿದ್ದರಿಂದ ಮೇವು ಈ ಹಿಂದಿನ ವರ್ಷಕ್ಕಿಂತ ಹೆಚ್ಚಿದೆ. ಒಂದೊಮ್ಮೆ ಯಾವುದೇ ತಾಲೂಕಿನಲ್ಲಿ ಮೇವಿನ ಕೊರತೆ ಕಂಡುಬಂದಲ್ಲಿ, ಕೂಡಲೇ ಗೋಶಾಲೆಗಳನ್ನು ತೆರೆಯಲು ಶಾಸಕರ ಕಾರ್ಯಪಡೆಗೆ ಅಧಿಕಾರ ನೀಡಲಾಗಿದೆ. ಬರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಲ್ಲಿರುವ ಹಣವನ್ನೇ ಮೇವು ಒದಗಿಸಲೂ ಉಪಯೋಗಿಸಿಕೊಳ್ಳುವ ಅಧಿಕಾರವನ್ನೂ ಜಿಲ್ಲಾಡಳಿತಕ್ಕೆ ನೀಡಲಾಗಿದೆ. 1.16ಲಕ್ಷ ಕೋಟಿ ಕ್ವಿಂಟಾಲ್ ಕೃಷಿ ಉತ್ಪನ್ನ ಖರೀದಿಸಿದ್ದು, ರೈತರಿಂದ ಬೆಳೆಯನ್ನು ಸರ್ಕಾರ ಖರೀದಿಸಲಾಗಿದೆ. ಆದ್ದರಿಂದ ರೈತರೂ ಆರ್ಥಿಕ ಸದೃಢರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement