ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯದ ಹಲವೆಡೆ ಮುಂದುವರಿದ ಮಳೆ ಅನಾಹುತ

ರಾಜ್ಯದ ಹಲವೆಡೆ ಬುಧವಾರವೂ ಭಾರಿ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆ ...

Mainashree
Updated On : 30 Apr 2014, 11:14 am

ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರವೂ ಭಾರಿ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಕೊಪ್ಪ ಗ್ರಾ ಪಂ ವ್ಯಾಪ್ತಿಯ ಕಬ್ಬರೆ ಗ್ರಾಮದಲ್ಲಿ ಅಡಕೆ ಮರ ಬಿದ್ದು ನವ್ಯಾ ಸಣ್ಣುಗೊಂಡ (4) ಬಾಲಕಿ ಮೃತಪಟ್ಟಿದ್ದಾಳೆ. ಶಿರಾಳಕೊಪ್ಪದಲ್ಲಿ ಬಿರುಗಾಳಿ ಮಳೆಗೆ 300ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಲಿಂಗಸ್ಗೂರಿನಲ್ಲಿ ಸಿಡಿಲಿಗೆ ಜಾನುವಾರುಗಳು ಸಾವನ್ನಪ್ಪಿವೆ.
ಲಿಂಗಸ್ಗೂರು:  ತಾಲೂಕಿನ ಹಲವೆಡೆ ಮಳೆ ಹಾಗೂ ಬಿರುಗಾಳಿಗೆ ಮನೆಗಳು ಜಖಂಗೊಂಡಿದ್ದು, ಸಿಡಿಲು ಬಡಿದು ಜಾನುವಾರುಗಳು ಸಾವನ್ನಪ್ಪಿವೆ. ಐದಬಾವಿ ಗ್ರಾಮ ಮತ್ತು ಮೆಟ್ಟರಮಡಿ ದೊಡ್ಡಿಯಲ್ಲಿ ಸಿಡಿಲು ಬಡಿದು ಎಮ್ಮೆ, ಆಕಳು, ಕುರಿಗಳು ಸಾವನ್ನಪ್ಪಿವೆ.
ಮುದಗಲ್: 2-3 ದಿನಗಳಿಂದ ಗುಡುಗು ಮಿಶ್ರಿತ ಮಳೆ ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜಂತಾಪುರ ಗ್ರಾಮದ ಹೊಲದಲ್ಲಿನ ಜನತಾ ಮನೆಗಳು ಜಖಂಗೊಂಡಿವೆ. ಸಣ್ಣ-ಪುಟ್ಟ ಜೋಪಡಿ, ಗುಡಿಸಲುಗಳು ಗಾಳಿಗೆ ಹಾರಿ ಹೋಗಿದೆ.
ಶಿರಾಳಕೊಪ್ಪ:  ಭಾರಿ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಶಿರಾಳಕೊಪ್ಪ ಹತ್ತಿರದ ಮಳೂರ ಮತ್ತು ಜಾವಗಟ್ಟೆ ಗ್ರಾಮಗಳ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿವೆ. ಗ್ರಾಮದ ಕೆಲವರಿಗೆ ಜಾವಗಟ್ಟಿಯ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಮಳೂರ ಮತ್ತು ಜಾವಗಟ್ಟಿ ಗ್ರಾಮದ ಜನರು ರಾತ್ರಿಪೂರ್ಣ ಭಯದದಲ್ಲಿ ಕಾಲ ಕಳೆಯುವಂತಾಯಿತು.
ಸುರಪುರ: ಪಟ್ಟಣದಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ. ಅಂಬೇಡ್ಕರ್ ನಗರದಲ್ಲಿ ಯಲ್ಲಮ್ಮ ವಿಜಯಕುಮಾರ ಅವರ ನಾಲ್ಕು ಕುರಿಗಳು ಸಿಡಿಲಿಗೆ ಬಲಿಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement