ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶೀಘ್ರ ಬೀದರ್ ವಿಮಾನ ನಿಲ್ದಾಣತಾಂತ್ರಿಕ ತೊಂದರೆ ನಿವಾರಣೆ

ಸಿದ್ಧವಾಗಿರುವ ಬೀದರ್ ವಿಮಾನ ನಿಲ್ದಾಣ ಬಳಸಲು ಜಿಎಂಆರ್...

Mainashree
Updated On : 1 May 2014, 11:10 am

ನವದೆಹಲಿ: ಸಿದ್ಧವಾಗಿರುವ ಬೀದರ್ ವಿಮಾನ ನಿಲ್ದಾಣ ಬಳಸಲು ಜಿಎಂಆರ್ ಸಂಸ್ಥೆ ಎತ್ತಿರುವ ತಕಾರಾರು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲವಾಸ ಭರವಸೆ ನೀಡಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಕರ್ನಾಟಕದ ವಾರ್ತಾ, ವಕ್ಫ್ ಮತ್ತು ಮೂಲಭೂತ ಸೌಲಭ್ಯ ಸಚಿವ ಆರ್.ರೋಷನ್ ಬೇಗ್ ಅವರಿಗೆ ವಸ್ತುಸ್ಥಿತಿ ವಿವರಿಸಿದ ಅಶೋಕ್ ಅವರು, ಈಗಿರುವುದು ತಾಂತ್ರಿಕ ತೊಂದರೆ, ಈ ತೊಂದರೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಬೀದರ್ ವಿಮಾನ ನಿಲ್ದಾಣ ಸಿದ್ಧವಾಗಿದ್ದು, ಬಳಕೆ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದಿಂದ ಅಗತ್ಯ ಅನುಮತಿ ದಕ್ಕಿಲ್ಲ. ಅದಕ್ಕೆ ಮುಖ್ಯ ಕಾರಣ ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿರುವ ಜಿಎಂಆರ್ ಸಂಸ್ಥೆ ಎತ್ತಿರುವ ತಕರಾರು.
ಜಿಎಂಆರ್ ಸಂಸ್ಥೆ ವಿಮಾನ ನಿಲ್ದಾಣ ನಿರ್ಮಿಸುವ ಮುನ್ನ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಹೈದರಾಬಾದ್‌ಗೆ ನೂರಾ ಐವತ್ತು ಕಿ..ಮೀ. ವ್ಯಾಪ್ತಿಯಲ್ಲಿ ಬೇರಾವುದೇ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡುವಂತಿಲ್ಲ ಎಂಬ ಉಪನಿಮಯವನ್ನು ಅಳವಡಿಸಲಾಗಿದೆ. ಹೀಗಾಗಿ ಜಿಎಂಆರ್ ತಕರಾರು ಎತ್ತಿದೆ. ಜಿಎಂಆರ್ ಸಂಸ್ಥೆ ತಕರಾರು ವಾಪಸ್ ಪಡೆದರೆ ಬೀದರ್ ವಿಮಾನ ನಿಲ್ದಾಣ ಬಳಕೆಗೆ ಅನುಮತಿ ದೊರೆಯುತ್ತದೆ. ಈ ಬಗ್ಗೆ ಜಿಎಂಆರ್ ಸಂಸ್ಥೆಯೊಂದಿಗೂ ಸಚಿವ ರೋಷನ್ ಬೇಗ್ ಮಾತುಕತೆ ನಡೆಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯ ಕರ್ನಾಟಕ ಸರ್ಕಾರ ಮತ್ತು ಜಿಎಂಆರ್ ಸಂಸ್ಥೆಯೊಂದಿಗೆ ಸಮಾಲೋಚಿಸಿ ಈಗ ಇರುವ ತಾಂತ್ರಿಕ ಅಡಚಣೆ ನಿವಾರಿಸಲಿದೆ.
ಸೌದಿ ಅರೆಬಿಯಾ ರಾಯಭಾರಿ ಭೇಟಿ
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮೂಲಭೂತ ಸೌಲಭ್ಯ ಸಚಿವ ಆರ್.ರೋಷನ್ ಬೇಗ್  ಸೌದಿ ಅರೇಬಿಯಾ ರಾಯಭಾರಿ ಡಾ.ಸೌದ್ ಮೊಹ್ಮದ್ ಅಸ್ಲತಿ ಅವರಿಗೆ ಆಹ್ವಾನ ನೀಡಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆ ಸಮಾವೇಶಕ್ಕೂ ಮುನ್ನ ಪೂರ್ವಭಾವಿಯಾಗಿ ಕರ್ನಾಟಕಕ್ಕೆ ಭೇಟಿ ನೀಡಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಸಮಾಲೋಚಿಸುವಂತೆ ರೋಷನ್ ಬೇಗ್ ಅವರು ಡಾ.ಸೌದ್ ಅಸ್ಲತಿಗೆ ಮನವಿ ಮಾಡಿದರು. ಇದೇ ವೇಳೆ ಕರ್ನಾಟಕದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ರಕ್ಷಣೆ ಮತ್ತು ಸೌಲಭ್ಯ ಒದಗಿಸುವಂತೆಯೂ ಸಚಿವ ಬೇಗ್ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement