ಶ್ರೀರಾಮುಲುಗೆ ನಿರೀಕ್ಷಣಾ ಜಾಮೀನು
ಬಳ್ಳಾರಿ: ಮಾಜಿ ಸಚಿವ, ಶ್ರೀರಾಮುಲು ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚೆಕ್ ಬೌನ್ಸ್, ಹಲ್ಲೆ ಆರೋಪ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಳ್ಳಾರಿ ಜಿಲ್ಲಾ ಸತ್ರ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮೈಸೂರಿನ ಬಿಎಸ್ಆರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಲ್. ಸೋಮಣ್ಣ, ಬಿ. ಶ್ರೀರಾಮುಲುಗೆ ರು. 2.96 ಕೋಟಿ ಸಾಲ ನೀಡಿದ್ದು, ಅದಕ್ಕೆ ಅವರು ಮಾ. 20ರಂದು ಬೆಂಗಳೂರಿನ ಹಲಸೂರು ಐಎನ್ಜಿ ವೈಶ್ಯ ಬ್ಯಾಂಕಿನ ಹೆಸರಲ್ಲಿ ಚೆಕ್ ನೀಡಿದ್ದರು. ಆದರೆ, ಚೆಕ್ ಬೌನ್ಸ್ ಆಗಿದ್ದಲ್ಲದೆ ಸೋಮಣ್ಣ ಮೇಲೆ ಹಲ್ಲೆ, ಕೊಲೆಗೆ ಯತ್ನಿಸಿದ್ದರು ಎಂಬ ಆರೋಪದ ಮೇಲೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ. 13ರಂದು ದೂರು ದಾಖಲಾಗಿತ್ತು.