ನೇಪಾಳದಲ್ಲಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ
ಕಾಠ್ಮಂಡು: ನೇಪಾಳಕ್ಕೆ ಎರಡು ದಿನಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಾಠ್ಮಂಡು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರಿಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.
ಕಾಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನದಲ್ಲಿ ಬಂದಿಳಿದ ಮೋದಿ ಅವರನ್ನು ನೇಪಾಲ ಪ್ರಧಾನಿ ಸುಶೀಲ್ ಕೊಯಿರಾಲ ಸೇರಿದಂತೆ ವಿವಿಧ ರಾಜಕೀಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ನೇಪಾಳಿ ಸೈನಿಕರು 19 ಕುಶಾಲತೋಪುಗಳನ್ನು ಸಿಡಿಸಿ ಮೋದಿ ಅವರಿಗೆ ಗೌರವ ವಂದನೆ ನೀಡಿದರು.
ಪ್ರಾದೇಶಿಕ ಸಹಭಾಗಿತ್ವಕ್ಕೆ ಪ್ರಚಾರ ನೀಡುವ ಉದ್ದೇಶದಿಂದ ನೇಪಾಳದ ಜೊತೆಗೆ ಉತ್ತಮ ಸಂಬಂಧಕ್ಕೆ ಹೊಸ ಆಯಾಂ ನೀಡಲು ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಅಧ್ಯಾಯ ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಇದು ನೇಪಾಳಕ್ಕೆ ತಲುಪಿದ್ದಾರೆ.