ಅಂತಾರಾಷ್ಟ್ರೀಯ ಕುರುಬ ಸಮಾವೇಶ ಅ.26ಕ್ಕೆ
ಅಂತಾರಾಷ್ಟ್ರೀಯ ಕುರುಬರ ಸಮಾವೇಶ ನವದೆಹಲಿಯಲ್ಲಿ ಅಕ್ಟೋಬರ್ 26ರಂದು ನಡೆಯಲಿದೆ. ದೇಶ ...
ನವದೆಹಲಿ: ಅಂತಾರಾಷ್ಟ್ರೀಯ ಕುರುಬರ ಸಮಾವೇಶ ನವದೆಹಲಿಯಲ್ಲಿ ಅಕ್ಟೋಬರ್ 26ರಂದು ನಡೆಯಲಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಸುಮಾರು 25 ಸಾವಿರ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುರುಬ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ಸಮಾವೇಶದ ಆಶಯವಾಗಿದೆ ಎಂದು ಮಂಗಳವಾರ ಪೂರ್ವಭಾವಿ ಸಭೆ ನಂತರ ಸಂಘಟಕರಲ್ಲೊಬ್ಬರಾದ ಮಾಜಿ ಸಂಸದ ಎಚ್.ವಿಶ್ವನಾಥ್ ತಿಳಿಸಿದ್ದಾರೆ.