ಅರಮನೆ ಸ್ವಾಧೀನ ವಿಷಯ ಚರ್ಚಿಸಲ್ಲ: ಸಿಎಂ
ಮೈಸೂರು ಅರಮನೆ ಸ್ವಾಧೀನ ವಿಷಯದ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ ಎಂದು ಮುಖ್ಯಮಂತ್ರಿ...
ಮೈಸೂರು: ಮೈಸೂರು ಅರಮನೆ ಸ್ವಾಧೀನ ವಿಷಯದ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿವಾದ ಸುಪ್ರೀಂಕೋಟ್ನಲ್ಲಿದೆ. ಹೀಗಾಗಿ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದರು. ಸರ್ಕಾರದ ವತಿಯಿಂದ ದಸರೆಯನ್ನು ಎಂದಿನಂತೆ ವೈಭವದಿಂದ ನಡೆಸಲಾಗುತ್ತದೆ. ಖಾಸಗಿ ದರ್ಬಾರ್ ನಡೆಸುವುದು, ಅರಮನೆ ಒಳಗೆ ಪೂಜೆ, ಉತ್ತರಾಧಿಕಾರಿ ಆಯ್ಕೆ ಅವರಿಗೆ (ರಾಜಮನೆತನ) ಬಿಟ್ಟ ವಿಚಾರ ಎಂದರು.