ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಮಲಾ ಬೇನಿವಾಲ್ ವಜಾ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಿಜೋರಾಮ್ ರಾಜ್ಯಪಾಲ ಡಾ.ಕಮಲಾ ಬೇನಿವಾಲ್...

Rashmi Kasaragodu
Updated On : 7 Aug 2014, 12:20 pm

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಿಜೋರಾಮ್ ರಾಜ್ಯಪಾಲ ಡಾ.ಕಮಲಾ ಬೇನಿವಾಲ್ ಅವರನ್ನು ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೇಂದ್ರ ಗೃಹ ಖಾತೆ ನಿವೃತ್ತ ಕಾರ್ಯದರ್ಶಿ ವಿನೋದ್ ಕುಮಾರ್ ದುಗ್ಗಲ್‌ರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸಮರಕ್ಕೆ ಮುಂದಾಗಿದ್ದರು. ಗುಜರಾತ್‌ನಲ್ಲಿ ಲೋಕಾಯುಕ್ತರ ನೇಮಕ ಸೇರಿದಂತೆ ಹಲವು ಕಾನೂನುಗಳಿಗೆ ಅಂಗೀಕಾರ ನೀಡಲು ನಿರಾಕರಿಸಿದ್ದರು. ಮೋದಿ ಸರ್ಕಾರ ಬಂದ ಬಳಿಕ ಗುಜರಾತ್‌ನಿಂದ ಮಿಜೋರಾಮ್‌ಗೆ ವರ್ಗಾಯಿಸಲಾಗಿತ್ತು. ಅವರ ಅಧಿಕಾರದ ಅವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement