ಬಾಲಪರಾಧಿಗಳಿಗೂ ಶಿಕ್ಷೆ
ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮತಿ ಸಿಕ್ಕಿದೆ. ಬಾಲಾಪರಾಧಿ ...
ನವದೆಹಲಿ: ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮತಿ ಸಿಕ್ಕಿದೆ.
ಬಾಲಾಪರಾಧಿ ವಿಚಾರಣೆಗೆ ಸಂಬಂಧಿಸಿ ಬಾಲ ನ್ಯಾಯ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡುವ ತಿದ್ದುಪಡಿಗೆ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಮುದ್ರೆ ದೊರೆಯಿತು. ಇನ್ನು ಮುಂದೆ ಅತ್ಯಾಚಾರ ಮತ್ತು ಹತ್ಯೆಯಂತಹ ಕ್ರೂರ ಅಪರಾಧಗಳಾದಾಗ 16ರಿಂದ 18 ವರ್ಷದೊಳಗಿನವರನ್ನು ವಯಸ್ಕರಂತೆ ಪರಿಗಣಿಸುವ ಅಧಿಕಾರ ಬಾಲ ನ್ಯಾಯ ಮಂಡಳಿಗೆ ಇರುತ್ತದೆ. 2012ರ ನಿರ್ಭಯಾ ಪ್ರಕರಣದ ಬಳಿಕ ಬಾಲಾಪರಾಧಿಗಳ ವಯಸ್ಸಿನ ಮಿತಿಯನ್ನು 18ರಿಂದ 16ಕ್ಕಿಳಿಸಬೇಕು ಎಂಬ ಒತ್ತಾಯ ಕೇಳಿಬರತೊಡಗಿತ್ತು. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿತ್ತು.
ರೇಲ್ವೆ, ರಕ್ಷಣೆ ಎಫ್‌ಡಿಐ
ರೈಲ್ವೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಕೇಂದ್ರ ಸಂಪುಟದಲ್ಲಿ ಹಸಿರು ನಿಶಾನೆ ದೊರೆತಿದೆ. ರೇಲ್ವೆ ಇಲಾಖೆಯಲ್ಲಿ ಶೇ.100ರಷ್ಟು ಎಫ್‌ಡಿಐಗೆ ಅನುಮತಿ ನೀಡಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇ.49ಕ್ಕೇರಿಸಲೂ ಒಪ್ಪಿಗೆ ಸಿಕ್ಕಿದೆ.
- ಈವರೆಗೆ ರಕ್ಷಣಾ ಕ್ಷೇತ್ರದಲ್ಲಿ ಶೇ.26ರಷ್ಟು ಎಫ್‌ಡಿಐಗೆ ಅನುಮತಿ ಇತ್ತು. ಇದನ್ನೀಗ ಶೇ.49ಕ್ಕೇರಿಸಲಾಗಿದೆ.
- ದೇಶೀಯ ಕೈಗಾರಿಕೆಗೆ ಉತ್ತೇಜನ ನೀಡುವುದೂ ಇದರ ಮುಖ್ಯ ಉದ್ದೇಶವಾಗಿದೆ.