ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೆಪಿಎಸ್‌ಸಿ ಎಲ್ಲಾ ಸದಸ್ಯರ ವಿರುದ್ಧ ತನಿಖೆ?

2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಸಂಬಂಧ ಕೆಪಿಎಸ್‌ಸಿಯ...

Lingaraj Badiger
Updated On : 12 Aug 2014, 2:28 am

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಸಂಬಂಧ ಕೆಪಿಎಸ್‌ಸಿಯ ಎಲ್ಲಾ 9 ಸದಸ್ಯರ ವಿರುದ್ಧವೂ ತನಿಖೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು ಇಂದು ವಿಧಾನಸೌಧದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು, 2011ರ ನೇಮಕಾತಿ ಅಕ್ರಮ ಸಂಬಂಧ ಕೆಪಿಎಸ್‌ಸಿಯ ಎಲ್ಲಾ ಸದಸ್ಯರ ವಿರುದ್ಧ ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸದ್ಯ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್ ಅವರ ವಿರುದ್ಧ ಮಾತ್ರ ತನಿಖೆ ನಡೆಸಲಾಗಿದೆ. ಆದರೆ ಇನ್ನುಳಿದ ಸದಸ್ಯರ ಬಗ್ಗೆಯೂ ತನಿಖೆ ನಡೆಸುವ ಚಿಂತನೆ ನಡೆಸಲಾಗುತ್ತಿದೆ ಎಂದರು.

2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವೇಳೆ ಎನ್.ರಾಮಕೃಷ್ಣ, ಬಿ.ಎಸ್.ಕೃಷ್ಣಪ್ರಸಾದ್, ಎಂ.ಮಹದೇವ್, ಎಚ್.ಡಿ.ಪಾಟೀಲ್, ಎಸ್.ಆರ್. ರಂಗಮೂರ್ತಿ, ಎಸ್.ದಯಾಶಂಕರ್, ಡಿ.ಪಿ.ಕನ್ನೀರಾಮ್, ಎಚ್.ವಿ.ಪಾರ್ಶ್ವನಾಥ್ ಹಾಗೂ ಮಂಗಳಾ ಶ್ರೀಧರ್ ಅವರು ಆಯೋಗದ ಸದಸ್ಯರಾಗಿದ್ದರು. ಪ್ರಕರಣ ಸಂಬಂಧ ಮಂಗಳಾ ಶ್ರೀಧರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement