ಕೊಳವೆ ಬಾವಿ ದುರಂತ ತಡೆ: ರಾಜ್ಯಕ್ಕೂ ಮಾದರಿ ತ.ನಾಡು ಕ್ರಮ
ತೆರೆದ ಬೋರ್‌ವೆಲ್‌ಗಳಲ್ಲಿ ಮಕ್ಕಳು...
ಚೆನ್ನೈ, ಬೆಂಗಳೂರು: ತೆರೆದ ಬೋರ್‌ವೆಲ್‌ಗಳಲ್ಲಿ ಮಕ್ಕಳು ಬೀಳುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ನಿರಂತರವೆಂಬಂತಾಗಿವೆ. ಈ ಸಂಬಂಧ ನೆರೆಯ ತಮಿಳುನಾಡು ಸರ್ಕಾರ ಮಾದರಿ ಹೆಜ್ಜೆಯನ್ನಿಟ್ಟಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕದಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಇಂಥ ಎರಡು ಪ್ರಕರಣಗಳು ನಡೆದ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಆ.31ರೊಳಗೆ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿ, ಮಾರ್ಗಸೂಚಿಯನ್ನು ಹೊರಡಿಸಿದೆ.
ತಮಿಳುನಾಡು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಸೋಮವಾರ ಎರಡು ವಿಧೇಯಕಗಳನ್ನು ಮಂಡಿಸಲಾಗಿದ್ದು, 1994ರ ತಮಿಳುನಾಡು ಪಂಚಾಯತ್ ಕಾಯ್ದೆ ಹಾಗೂ ತಮಿಳುನಾಡು ಜಿಲ್ಲಾ ಮುನ್ಸಿಪಲ್ ಕಾಯ್ದೆ, ಮಧುರೈ ನಗರ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ, ಕೊಯಮತ್ತೂರು ನಗರ ಮುನ್ಸಿಪಲ್ ಆಡಳಿತ ಕಾಯ್ದೆ ಹಾಗೂ ಚೆನ್ನೈ ಮೆಟ್ರೋಪಾಲಿಟನ್ ಏರಿಯಾ ಗ್ರೌಂಡ್‌ವಾಟರ್ ಕಾಯ್ದೆಗಳ ತಿದ್ದುಪಡಿಗೆ ನಿರ್ಧರಿಸಲಾಗಿದೆ.
ತಿದ್ದುಪಡಿಯ ಪ್ರಮುಖ ಅಂಶಗಳು
ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ, ಇನ್ನು ಮುಂದೆ ಪ್ರತಿ ಕೊಳವೆ ಬಾವಿ ಅನುಮತಿಗೆ 5 ಸಾವಿರ ರು.ವರೆಗೆ ಶುಲ್ಕ.
ಸಂಬಂಧಪಟ್ಟ ಜಿಲ್ಲಾಧಿಕಾರಿಯಿಂದ ಕೊಳವೆ ಬಾವಿ ಬಗ್ಗೆ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.
ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ.
ಅವಗಢಗಳೇನಾದರೂ ಸಂಭವಿಸಿದಲ್ಲಿ, ಬೋರ್‌ವೆಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲು.
ಆರೋಪ ಸಾಬೀತಾದಲ್ಲಿ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರು.ದಂಡ.