ಉತ್ಸವಕ್ಕೆ ತೆರಳಿದ್ದ 4 ಮಕ್ಕಳು ಮಸಣಕ್ಕೆ!
ಉತ್ಸವಕ್ಕೆ ತೆರಳಿದ್ದ ನಾಲ್ವರು ಮಕ್ಕಳು ಡೋರ್‌ಲಾಕ್ ಮಾಡದೆ ನಿಲ್ಲಿಸಿದ್ದ ಅಪರಿಚಿತ...
ಚೆನ್ನೈ: ಉತ್ಸವಕ್ಕೆ ತೆರಳಿದ್ದ ನಾಲ್ವರು ಮಕ್ಕಳು ಡೋರ್‌ಲಾಕ್ ಮಾಡದೆ ನಿಲ್ಲಿಸಿದ್ದ ಅಪರಿಚಿತ ಕಾರೊಂದನ್ನು ಹತ್ತಿ ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತುಟಿರೋರನ್ ಜಿಲ್ಲೆಯ ವೇದನಾದಮ್ ದೇವಸ್ಥಾನದಲ್ಲಿ ನಿನ್ನೆ ನಡೆದ ದೇವರ ಉತ್ಸವ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಮಕ್ಕಳು ತೆರಳಿದ್ದರು. ಆಟವಾಡುವಾಗ ನಾಲ್ವರು ಮಕ್ಕಳು ದೇವಾಸ್ಥಾನದ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ ಹತ್ತಿ ಕುಳಿತಿದ್ದಾರೆ. ನಂತರ ಡೋರಲಾಕ್ ತೆಗೆಯಲು ಸಾಧ್ಯವಾಗದೆ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಅವರು ಕೇವಲ 4 ರಿಂದ 10 ವರ್ಷದ ಒಳಗಿನವರು ಎಂದು ತಿಳಿದು ಬಂದಿದೆ. ಮಕ್ಕಳ ಮೃತ ದೇಹಗಳನ್ನು ಕಂಡು ಜರ್ಜರಿತರಾದ ಮಕ್ಕಳ ಪೋಷಕರು ಮಕ್ಕಳ ಶವಗಳನ್ನು ಪಡೆಯಲು ಮೊದಲು ನಿರಾಕರಿಸಿದರಾದರೂ ನಂತರ ತೆಗೆದುಕೊಂಡರು. ಕಾರು ನಿಲ್ಲಿಸಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತ ಮಗುವೊಂದರ ತಾಯಿ ಮುತ್ಯಾಲಮ್ಮಾಳ ಆಗ್ರಹಿಸಿದ್ದರು.
ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಉದಾಸೀನತೆ ತೋರಿದ ಆರೋಪದ ಮೇಲೆ ಬ್ಯಾಂಕ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಸಾಲಗಾರರಿಂದ ವಶಪಡಿಸಿಕೊಳ್ಳಲಾಗಿದ್ದ ಕಾರುಗಳ ಜತೆ ಈ ಕಾರನ್ನೂ ದೇವಾಲಯದ ಬಳಿ ನಿಲ್ಲಿಸಲಾಗಿತ್ತು.