ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಉಪ ಸಮರಕ್ಕೆ ಕ್ಷಣಗಣನೆ: ಮೂರರಲ್ಲಿ ಗೆಲ್ಲೋರ್ಯಾರು?

ರಾಜ್ಯದ ಮೂರು ವಿಧಾಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ...

Lingaraj Badiger
Updated On : 20 Aug 2014, 5:00 am

ಬೆಂಗಳೂರು: ರಾಜ್ಯದ ಮೂರು ವಿಧಾಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆಬಿದ್ದಿದೆ. ಈಗ ಮನೆಮನೆಗೆ ತೆರಳಿ ಮತದಾರ ಪ್ರಭುವಿನ ಮನವೊಲಿಸುವ ಕೊನೆಯ ಹಂತದ ಕಸರತ್ತಿಗೂ ತರೆ ಬಿದ್ದಿದ್ದು, ಅಂತಿಮವಾಗಿ ಯಾರ ಕೈ ಮೇಲೆ ಮತ್ತು ಕೆಳಗೆ ಎಂಬುದು ನಾಳೆ ನಿರ್ಧಾರವಾಗಲಿದೆ.

ಲೋಕಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರತಿಷ್ಠೆ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ತಮ್ಮಿಂದ ತೆರವಾದ ಸ್ಥಾನಕ್ಕೆ ತಮ್ಮ ಮಗನನ್ನೆ ತರಬೇಕು ಎಂದು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಗನ ಗೆಲುವೇ ಪ್ರಧಾನವಾಗಿದೆ. ಇನ್ನು ಬಳ್ಳಾರಿಯಲ್ಲೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಈ ಉಪ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಒಟ್ಟಿನಲ್ಲಿ ಮೂರೂ ಬಿಡಲು ಕಾಂಗ್ರೆಸ್, ಬಿಜೆಪಿ ಇಬ್ಬರೂ ತಯಾರಿಲ್ಲ. ಮೂರು ಸ್ಥಾನಗಳಲ್ಲೂ ಜಿದ್ದಾಜಿದ್ದಿನ ಸ್ಫರ್ಧೆ ಏರ್ಪಟ್ಟಿದೆ.

ಶಿವಮೊಗ್ಗದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಹಾಗೂ ಕಾಂಗ್ರೆಸ್‌ನಿಂದ ಶಾಂತವೀರಪ್ಪ ಗೌಡ ಅವರು ಕಣದಲ್ಲಿದ್ದಾರೆ. ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿಯಿಂದ ಶ್ರೀರಾಮುಲು ಆಪ್ತ ಓಬಳೇಶ್ ಹಾಗೂ ಕಾಂಗ್ರೆಸ್‌ನಿಂದ ಗೋಪಾಲ ಕೃಷ್ಣ ಅವರು ಸ್ಪರ್ಧಿಸಿದ್ದಾರೆ. ಇನ್ನು ಸಕ್ಕರೆ ಜಿಲ್ಲೆಯ ಶಕ್ತಿಕೇಂದ್ರವೆಂದೇ ಖ್ಯಾತಿ ಪಡೆದ ಚಿಕ್ಕೋಡಿ-ಸದಲಗಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿರುವ ಕಾಂಗ್ರೆಸ್‌ನ ಗಣೇಶ್ ಹುಕ್ಕೇರಿ ಹಾಗೂ ಬಿಜೆಪಿ ಕವಟಗಿ ಮಠ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಕಾಂಚಾಣ ಕುಣಿತ ಶುರು!
'ಕತ್ತಲ ರಾತ್ರಿ'ಗೂ ಮುನ್ನವೇ ಚುನಾವಣಾ ಕಣದಲ್ಲಿ ಕುರುಡು ಕಾಂಚಾಣ ಕುಣಿಯಲು ಶುರುಮಾಡಿದ್ದು, ಇಂದು ಮಧ್ಯಾಹ್ನ ಬೆಳಗಾವಿ ಜಿಲ್ಲೆ ಚಿಕ್ಕೊಡಿಯ ಖಡಕಲಾಟ ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 9 ಕೋಟಿ ರುಪಾಯಿ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಾಳೆ ನಡೆಯುವ ಸದಲಗಾ ವಿಧಾನಸಭೆ ಉಪ ಚುನಾವಣೆಯಲ್ಲಿ, ಮತದಾರರಿಗೆ ಹಂಚಲು ಈ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಚುನಾವಣಾ ಆಯೋಗದ ಅಧಿಕಾರಿಗಳು ಎಷ್ಟೇ ಜಾಗೂರುಕತೆ ವಹಿಸಿ ಚಾಪೆ ಕಳೆಗೆ ತೂರಿದರೂ, ರಾಜಕರಾಣಿಗಳು ಮಾತ್ರ ರಂಗೋಲಿ ಕೆಳಗಡೆ ತೂರುತ್ತಾರೆ. ಇಂದು ರಾತ್ರಿ ಒಂದು ಪಕ್ಷ ಪ್ರತಿಯೊಂದು ಮತಕ್ಕೆ 500 ರುಪಾಯಿ ಹಂಚಿದರೆ, ಮತ್ತೊಂದು ಪಕ್ಷ ಓಟಿಗೆ 300ರಿಂದ 400 ರುಪಾಯಿ ಹಂಚುತ್ತಿವೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement