ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ನಿಧನ
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಯೋಗ ಗುರು ಬಿ.ಕೆ.ಎಸ್ ಅಯ್ಯಂಗಾರ್...
ಪುಣೆ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಬುಧವಾರ ವಿಧಿವಶರಾಗಿದ್ದಾರೆ.
ಉಸಿರಾಟದ ತೊಂದರೆ ಮತ್ತು ಕಿಡ್ನಿ ವೈಪಲ್ಯವಾಗಿದ್ದರಿಂದ ಕಳೆದ ಒಂದು ವಾರದ ಹಿಂದೆ ಪುಣೆಯಲ್ಲಿರುವ ಪ್ರಯಾಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಯಾಲಿಸಿಸ್ಗೆ ಒಳಪಡಿಸಿದರೂ ಚೇತರಿಕೆ ಕಂಡಿರಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.15ಕ್ಕೆ ನಿಧನರಾಗಿದ್ದಾರೆ.
1918 ಡಿಸೆಂಬರ್ 14ರಂದು ಜನಿಸಿದ್ದ ಅಯ್ಯಂಗಾರ್ ಅವರಿಗೆ 96 ವರ್ಷ ವಯಸ್ಸಾಗಿತ್ತು. ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಪುಣ್ಯಭೂಷಣ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅಯ್ಯಂಗಾರ್ ಯೋಗದ ಪಿತಾಮಹರೆನಿಸಿದ್ದರು.
ಮೂಲತ: ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದವರಾದ ಅಯ್ಯಂಗಾರ್ ಯೋಗಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು. ಯೋಗ ಶಿಕ್ಷಣ ಕುರಿತು ಅನೇಕ ಪುಸ್ತಕಗಳನ್ನು ಅಯ್ಯಂಗಾರ್ ಬರೆದಿದ್ದಾರೆ. ಆಧುನಿಕ ಯೋಗದ ಪಿತಾಮಹ ಎಂದಿನಿಸಿರುವ ತಿರುಮಲೈ ಕೃಷ್ಣಮಾಚಾರ್ಯ ಅವರ ಶಿಷ್ಯಂದರಲ್ಲಿ ಅಯ್ಯಂಗಾರ್ ಕೂಡ ಒಬ್ಬರು.
1991ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2014ರಲ್ಲಿ ಪದ್ಮವಿಭೂಷಣ, ಪುಣ್ಯಭೂಷಣ ಮತ್ತು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.