ಅನಂತಮೂರ್ತಿ ನಿಧನಕ್ಕೆ ಗಣ್ಯರ ಸಂತಾಪ
ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ..
ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ. ಕನ್ನಡ ಸಾಹಿತ್ಯವನ್ನು ಹೆಚ್ಚು ಶ್ರೀಮಂತಗೊಳಿಸಿದವರು. ಹಳೆಯ ಕಂದಾಚಾರ, ಅನಿಷ್ಟ ಪದ್ದತಿಗಳ ವಿರುದ್ಧ ದನಿ ಎತ್ತಿದ ಧೀಮಂತ ಸಾಹಿತಿ
-ಸಿದ್ದರಾಮಯ್ಯ ಮುಖ್ಯಮಂತ್ರಿ
ಅನಂತಮೂರ್ತಿ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯಾ ಬರೆದ ಸಾಹಿತಿ. ತಮ್ಮ ನಿಲುವನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಸಾಹಿತಿಯಾಗಿದ್ದರು
-ಜಯಂತ್ ಕಾಯ್ಕಿಣಿ, ಸಾಹಿತಿ
ಅನಂತಮೂರ್ತಿ ದಿಟ್ಟ ಹೋರಾಟಗಾರ ತಮ್ಮ ಸಾಹಿತ್ಯದ ಮೂಲಕವೇ ಕೆಲವೊಂದು ಬದಲಾವಣೆಗಳನ್ನು ತಂದರು
-ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ.
ಅನಂತಮೂರ್ತಿಯವರು ವಿಶ್ವ ವಿಖ್ಯಾತ ಬರಹಗಾರರು, ಅವರ ಬಗ್ಗೆ ವಿದೇಶದಲ್ಲಿನ ಕೆಲ ಸಾಹಿತಿಗಳು ಮಾತನಾಡುತ್ತಿದ್ದರು. ಅನಂತಮೂರ್ತಿ ಪರಿಸರ ಬಗೆಗಿನ ವೈಚಾರಿಕ ಸಾಹಿತಿ
-ಪ್ರೋ. ದೊಡ್ಡರಂಗೇಗೌಡ, ಸಾಹಿತಿ