ಪ್ರಧಾನ ಸುದ್ದಿ

ಎನ್ ಡಿ ಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ತೃಣಮೂಲ

Guruprasad Narayana

ನವದೆಹಲಿ: ಆರು ತಿಂಗಳು ಪೂರೈಸಿದ ಬಿಜೆಪಿ/ಎನ್ ಡಿ ಎ ಸರ್ಕಾರವನ್ನು ವಿರೋಧ ಪಕ್ಷಗಳು ಸೋಮವಾರ ಲೋಕಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿವೆ. ಕೋಲ್ಕತ್ತಾದಲ್ಲಿ ಬಿಜೆಪಿ ನಡೆಸಿದ ಭರ್ಜರಿ ಪ್ರಚಾರ ಸಭೆಯಿಂದ ವಿಚಲಿತರಾಗಿರುವ ತೃಣಮೂಲ ಪಕ್ಷದ ಲೋಕಸಭಾ ಸದಸ್ಯರು ಅಮಿತ್ ಷಾ ವಿರುದ್ಧ 'ಸಹರಾ' ಎಂಬ ಶೀರ್ಷಿಕೆಯಿರುವ ಕೆಂಪು ಪುಸ್ತಕ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಹೆಸರು ಸಹರಾ ಸಂಸ್ಥೆಯ ಮುಖ್ಯಸ್ಥನ ದಿನಚರಿಯಲ್ಲಿ ಕಾಣಿಸಿಕೊಂಡಿದೆ ಎಂಬ ಆರೋಪದ ಮೇಲೆ ಅಮಿತ್ ಷಾ ಅವರನ್ನು ಕೂಡ ಆಪಾದಿತರ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷ, ಎನ್ ಡಿ ಎ ಸರ್ಕಾರದ ಯು-ಟರ್ನ್ ಗಳ ಬಗ್ಗೆ ಒಂದು ಪುಸ್ತಕವನ್ನು ತನ್ನ ಪಕ್ಷದ ಕಛೇರಿಯಲ್ಲಿ ಬಿಡುಗಡೆ ಮಾಡಿತು. ಅಧಿಕಾರಕ್ಕೆ ಬಂದಾಗಿಲಿಂದಲೂ ಆರು ತಿಂಗಳಲ್ಲಿ ಸರ್ಕಾರ ಬರಿ ಯು-ಟರ್ನ್ ಗಳನ್ನೇ ಮಾಡಿದೆ ಎಂಬ ಘೋಷಣೆಯುಳ್ಳ ಈ ಪುಸ್ತಕವನ್ನು ಇಂಗ್ಲಿಶ್ ಮತ್ತು ಇನ್ನಿತರ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬಿಡುಗಡೆ ಮಾಡಿದೆ.

೩೦ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಎನ್ ಡಿ ಎ ಸರ್ಕಾರ ತೆಗೆದುಕೊಂಡಿರುವ ೨೨ ಯು- ಟರ್ನ್ ಗಳ ವಿವರಗಳಿವೆ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್.

SCROLL FOR NEXT